ನ್ಯೂಸ್ ನಾಟೌಟ್: ಕಳೆದ ವರ್ಷ ನವೆಂಬರ್ 1 ಮತ್ತು ನವೆಂಬರ್ 30 ರ ನಡುವೆ ವಾಟ್ಸ್ಆ್ಯಪ್ ಭಾರತದಲ್ಲಿ 71,96,000 ಖಾತೆಗಳನ್ನು ನಿಷೇಧಿಸಿದೆ ಎಂದು ವರದಿ ತಿಳಿಸಿದೆ. ನವೆಂಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ದೇಶದಲ್ಲಿ ದಾಖಲೆಯ 8841 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ. ಇವುಗಳಲ್ಲಿ ಖಾತೆಗಳನ್ನು ನಿಷೇಧಿಸುವುದು ಅಥವಾ ಹಿಂದೆ ನಿಷೇಧಿತ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಸೇರಿದೆ.
ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ ಆ್ಯಪ್(WhatsApp) ಕಳೆದ ನವೆಂಬರ್ ತಿಂಗಳಲ್ಲಿ ಬರೋಬ್ಬರಿ 71 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ನವೆಂಬರ್ ತಿಂಗಳಲ್ಲಿ ವಾಟ್ಸ್ಆ್ಯಪ್ ದೇಶದಲ್ಲಿ ದಾಖಲೆಯ 8841 ದೂರುಗಳನ್ನು ಸ್ವೀಕರಿಸಿದೆ ಎಂದು ಹೇಳಿದೆ.
ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ಕಳೆದ ಅಕ್ಟೋಬರ್ 1 ರಿಂದ 31 ರ ನಡುವೆ ಒಟ್ಟು 7,548,000 ಖಾತೆಗಳನ್ನು ನಿಷೇಧಿಸಲಾಗಿತ್ತು ಎಂದು ಮಾಹಿತಿ ನೀಡಲಾಗಿದೆ.