ನ್ಯೂಸ್ ನಾಟೌಟ್ : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದಣ್ಣ ನಿಶ್ಚಿತಾರ್ಥದ ಬಗ್ಗೆ ಭಾರೀ ಸುದ್ದಿಯಾಗುತ್ತಿದ್ದು,ಫೆಬ್ರವರಿ ತಿಂಗಳಲ್ಲಿ ಎಂಗೇಜ್ ಮೆಂಟ್ ಎನ್ನುವ ಬಗ್ಗೆ ವರದಿಗಳು ಬಂದಿದ್ದವು.ಈ ಬಗ್ಗೆ ಈ ಖ್ಯಾತ ಜೋಡಿಯು ಏನೂ ಉತ್ತರ ಕೊಡದೇ ಮೌನವಾಗಿದ್ದರು.ಇದೀಗ ದೇವರಕೊಂಡ ಮೌನ ಮುರಿದಿದ್ದಾರೆ.
ನನ್ನ ನಿಶ್ಚಿತಾರ್ಥದ ಬಗ್ಗೆ ಮಾದ್ಯಮದಲ್ಲಿ ವರದಿಯಾದ ವಿಚಾರ ಶುದ್ಧ ಸುಳ್ಳು,ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಅಥವಾ ಮದುವೆಯಾಗುತ್ತಿಲ್ಲ. ಎರಡು ವರ್ಷಗಳಿಂದ ಮಾಧ್ಯಮಗಳು ನನ್ನ ಮದುವೆ ಬಗ್ಗೆ ವರದಿ ಬಿತ್ತರಿಸುತ್ತಿದ್ದಾರೆ. ಪ್ರತಿ ವರ್ಷ ಈ ವದಂತಿಯನ್ನು ನಾನು ಕೇಳುತ್ತೇನೆ. ಅವರು ನನ್ನನ್ನು ಹಿಡಿದು ಮದುವೆ ಮಾಡಲು ಕಾಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಒಟ್ಟಿಗೆ ಬದುಕಲು ನಿರ್ಧರಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದ್ದವು. ಇದೀಗ ದೇವರ ಕೊಂಡ ವದಂತಿಯನ್ನು ನಿರಾಕರಿಸಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ್ದು, ಈ ಎರಡೂ ಚಿತ್ರಗಳು ಇಬ್ಬರಿಗೂ ಸಾಕಷ್ಟು ಹೆಸರು ತುಂದುಕೊಟ್ಟಿದೆ. ಕೊನೆಯದಾಗಿ ‘ಕುಶಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವಿಜಯ್, ಸದ್ಯ ‘ಫ್ಯಾಮಿಲಿ ಸ್ಟಾರ್’ ಮತ್ತು ‘ವಿಡಿ 12’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ನ ಅವರ ‘ಪುಷ್ಪ: ದಿ ರೂಲ್’, ‘ರೇನ್ಬೋ’, ‘ದಿ ಗರ್ಲ್ಫ್ರೆಂಡ್’ ಮತ್ತು ‘ಚಾವಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸದ್ಯ ರಶ್ಮಿಕಾ ಕೆಲಸ ಮಾಡ್ತಿದ್ದಾರೆ.