ಮೋದಿ ಬೆದರಿಕೆಗಳಿಗೆ ಬಗ್ಗಲ್ಲ ಎಂದ ಮಾಲ್ದೀವ್ಸ್ ಅಧ್ಯಕ್ಷ..! ಚೀನಾದ ಪ್ರವಾಸಿಗರು ಮಾಲ್ದೀವ್ಸ್ ಗೆ ಬರುವಂತೆ ಮನವಿ

ನ್ಯೂಸ್ ನಾಟೌಟ್‌: “ಮಾಲ್ದೀವ್ಸ್ ಸಣ್ಣ ದೇಶವಿರಬಹುದು. ಆದರೆ ಯಾವುದೇ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ” , ಎಂದು ಮಾಲ್ದೀವ್ಸ್ನ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಹೇಳಿದ್ದಾರೆ. ಐದು ದಿನಗಳ ಚೀನಾ ಪ್ರವಾಸ ಮುಗಿಸಿ ವಾಪಾಸ್ಸಾಗಿರುವ ಮಾಲ್ದೀವ್ಸ್ನ ಅಧ್ಯಕ್ಷ ಪ್ರಧಾನಿ ಮೋದಿ ವಿರುದ್ಧ ಅಲ್ಲಿನ ಮೂವರು ಸಚಿವರು ಹೇಳಿಕೆ ನೀಡಿದ ನಂತರ ಭಾರತ ಹಾಗೂ ಮಾಲ್ದೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಹೇಳಿಕೆ ನೀಡಿದ್ದ ಮೂರು ಸಚಿವರನ್ನು ಮಾಲ್ದೀವ್ಸ್ ಈಗಾಗಲೇ ವಜಾಗೊಳಿಸಿದೆ. ಈ ಸಂಬಂಧ ಭಾರತದ ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ ಎಂದು ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆಗೆ ಚೀನಾಗೆ 5 ದಿನಗಳ ಭೇಟಿ ನೀಡಿದ್ದ ಅಧ್ಯಕ್ಷ ಮುಯಿಝ್ಝ 20 ಒಪ್ಪಂದಗಳಿಗೆ ಚೀನಾದೊಂದಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಚೀನಾದಿಂದ ಹೆಚ್ಚಿನ ಪ್ರವಾಸಿಗರನ್ನು ಮಾಲ್ದೀವ್ಸ್ ಗೆ ಕಳಿಸುವಂತೆ ಅಲ್ಲಿನ ಸರಕಾರದ ಜೊತೆ ಮುಯಿಝ್ಝ ವಿನಂತಿಸಿಕೊಂಡಿದ್ದರು ಎನ್ನಲಾಗಿದೆ. ಈಗ ಲಕ್ಷದ್ವೀಪಗಳತ್ತ ಪ್ರವಾಸಿಗರು ಒಲವು ತೊರುತ್ತಿರುವುದು ಮಾಲ್ದೀವ್ಸ್ ಗೆ ಆರ್ಥಿಕವಾಗಿಯೂ ಹೊಡೆತ ಬೀಳುತ್ತಿದೆ ಎನ್ನಲಾಗಿದೆ. Follow us for more updates: FB PAGE : https://www.facebook.com/NewsNotOut2023 Insta : https://www.instagram.com/newsnotout/ Tweet : https://twitter.com/News_Not_Out YouTube : https://www.youtube.com/@newsnotout8209 Koo app: https://www.kooapp.com/profile/NewsNotOut Website : https://newsnotout.com/