ನ್ಯೂಸ್ ನಾಟೌಟ್: ಯಕ್ಷಗಾನದಲ್ಲಿ ಚೆಂಡೆ ಮದ್ದಳೆ ವಾದಕರಾಗಿ ಗುರುತಿಸಿಕೊಂಡಿದ್ದ ನಾರಾಯಣ ನಾಯಕ್ ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ತಾಲೂಕಿನ ಮರ್ಕಂಜದಿಂದ ವರದಿಯಾಗಿದೆ.ಇವರು ಯಶಸ್ವಿ ಕೃಷಿಕರೂ ಆಗಿದ್ದು,ಯಕ್ಷಗಾನ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.
ಮರ್ಕಂಜ ಗ್ರಾಮದ ತೋಟಚಾವಡಿ ನಾರಾಯಣ ನಾಯಕ್ ಅವರು ಇಂದು ಮುಂಜಾನೆ ವೇಳೆ ತುಂಬಾ ಹೊತ್ತು ಮನೆಯಲ್ಲಿ ಬಾಗಿಲು ಹಾಕಿಕೊಂಡಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಮನೆ ಬಳಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇವರಿಗೆ ಇಬ್ಬರು ಪುತ್ರಿಯರಿದ್ದು,ಇಬ್ಬರಿಗೂ ಮದುವೆಯಾಗಿತ್ತು. ಇವರ ಪತ್ನಿ ಮಗಳ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.
ತೋಟಚಾವಡಿ ನಾರಾಯಣ ನಾಯಕ್ ಅವರು ಓರ್ವ ಉತ್ತಮ ಕೃಷಿಕ ಜತೆಗೆ ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ ವಾದನ ಶೈಲಿಯು ಅನೇಕರ ಹೃದಯವನ್ನೇ ಗೆದ್ದಿತ್ತು.ಮೃತರ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಕಳೆದ ಕೆಲ ಸಮಯದಿಂದ ಅಡಿಕೆಗೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ರಬ್ಬರ್ ಇಳುವರಿ ಕುಂಟಿತವಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದ್ದು,ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.