ನ್ಯೂಸ್ ನಾಟೌಟ್ :ಮರದಿಂದ ಬಿದ್ದು ಅನಾರೋಗ್ಯದಿಂದ ಬಳಲುತ್ತಿರುವ ರಿಕ್ಷಾ ಡ್ರೈವರ್ ಜಗದೀಶ್ ಕುಕ್ಕಾಜೆ ಕಾನಾ ಪೈಚಾರ್ರವರ ಮನೆಗೆ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ ) ಭೇಟಿ ನೀಡಿದೆ.ಈ ವೇಳೆ ಅವರಿಗೆ ಮನೆಗೆ ಬೇಕಾದ ಅಗತ್ಯ ಅಡುಗೆ ಸಾಮಾಗ್ರಿಗಳನ್ನು ಹಾಗೂ ನಗದು ನೀಡಿ ಮಾನವೀಯತೆ ಮೆರೆದ ಅಪರೂಪದ ಘಟನೆ ಬಗ್ಗೆ ವರದಿಯಾಗಿದೆ.
ಈ ಸಂದರ್ಭ ಬಿ.ಎಮ್.ಎಸ್ ಸಂಯೋಜಿತ ಅಧ್ಯಕ್ಷ ರಾಧಾ ಕೃಷ್ಣ ಬೈತಡ್ಕ, ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಉಬರಡ್ಕ,ಮನೋಹರ್ ಚೊಕ್ಕಾಡಿ ,ನಿತ್ಯಾನಂದ,ಮೋಹನ್ ಚೊಕ್ಕಾಡಿ, ರವಿ ಜಾಲ್ಸೂರು,ಚಾಮಯ್ಯ,ಕಾರ್ತಿಕ್ ಗಾಂಧಿನಗರ, ಚಂದ್ರ ಶೇಖರ್ ಮರ್ಕಂಜ, ರೋಹಿತ್ ಕುಂಚಡ್ಕ, ಜಯಂತ್ ಕುರುಂಜಿ ಭಾಗ್ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಜಗದೀಶ್ ಕುಕ್ಕಾಜೆ ಕಾನಾ ಅವರು ಬಿ.ಎಮ್.ಎಸ್ ರಿಕ್ಷಾ ಚಾಲಕರ ಸಂಘದ ನಿರ್ದೇಶಕರೂ ಕೂಡ ಹೌದು.ಮಾತ್ರವಲ್ಲ ಹಲವಾರು ಸಂಘ ಸಂಸ್ಥೆ ಗಳಲ್ಲಿಯೂ ಸಕ್ರಿಯರಾಗಿ ಗುರುತಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು.