ನ್ಯೂಸ್ ನಾಟೌಟ್ : ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮರ್ಕಂಜದ ಸೇವಾಜೆ ಎಂಬಲ್ಲಿಂದ ವರದಿಯಾಗಿದೆ.ಜ. 18ರಂದು ಸಂಜೆ ವೇಳೆ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಪೊಲೀಸ್ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿದ್ದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ.
ಮರ್ಕಂಜ ಗ್ರಾಮ ಸುಳ್ಯ ನಿವಾಸಿ ದಯಾನಂದ(30) ಎಂಬುವವರು ಡಿಯೋ ಸ್ಕೂಟರ್ನ್ನು ಚಲಾಯಿಸಿಕೊಂಡು ಬರುತ್ತಿದ್ದರು.ಆಗ ಅವರನ್ನು ತಡೆದ ಪೊಲೀಸರು ದಾಖಲಾತಿಯನ್ನು ಪರಿಶೀಲಿಸುತ್ತಾರೆ.ಈ ಸಂದರ್ಭ ಸ್ಕೂಟರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ 180 ಎಂಎಲ್ನ 35 ವಿಸ್ಕಿ ಸ್ಯಾಚೆಟ್ ಪ್ಯಾಕೇಟ್ಗಳು ಹಾಗೂ 90 ಎಂ ಎಲ್ನ 10 ವಿಸ್ಕಿ ಸ್ಯಾಚೆಟ್ ಪ್ಯಾಕೇಟ್ಗಳು ಪತ್ತೆಯಾಗಿವೆ..!
ಈ ಬಗ್ಗೆ ಸ್ಕೂಟರ್ ಸವಾರನ ಬಳಿ ಪೊಲೀಸರು ವಿಚಾರಿಸಿದಾಗ,ತಾನು ಸುಳ್ಯ ಮರ್ಕಂಜ ಗ್ರಾಮದ ಜಯರಾಮ ಎಂಬವರ ಸೂಚನೆಯಂತೆ, ಮದ್ಯಗಳನ್ನು ಅಕ್ರಮವಾಗಿ ಸ್ಕೂಟರ್ನಲ್ಲಿ ಸಂಗ್ರಹ ಮಾಡಿಕೊಂಡು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಒಟ್ಟು 3,208/-ರೂಪಾಯಿ ಮೌಲ್ಯದ ಮದ್ಯ ತುಂಬಿದ 7.200 ಲೀಟರ್ನ ವಿಸ್ಕಿ ಸ್ಯಾಚೇಟ್ ಪ್ಯಾಕೇಟ್ಗಳನ್ನು ಹಾಗೂ ದ್ವಿಚಕ್ರ ವಾಹನ ಸ್ವಾಧೀನಪಡಿಸಿಕೊಂಡಿದ್ದಾರೆ.ಆರೋಪಿಗಳಾದ ದಯಾನಂದ ಹಾಗೂ ಜಯರಾಮ ವಿರುದ್ದ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.