ನ್ಯೂಸ್ ನಾಟೌಟ್: ರಾಜ್ಯ ರಾಜಕೀಯದ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳಿದ್ದಾರೆ.
(ಜ.25) ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಬಿಜೆಪಿಗೆ ವಾಪಸ್ ಆಗುವ ನಿರ್ಧಾರ ಪ್ರಕಟಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಪ್ರಕಟಿಸಿದರು.
ಜಗದೀಶ್ ಶೆಟ್ಟರ್ ಏಳೇ ತಿಂಗಳಲ್ಲಿ ಕಾಂಗ್ರೆಸ್ಗೆ ಕೈಕೊಟ್ಟು ಪುನಃ ಬಿಜೆಪಿಗೆ ಮರಳಿದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್,ನಾನು ಈಗ ಮಾತಾಡೋದಿಲ್ಲ. ಎಲ್ಲ ವಿಷಯ ಸಂಪೂರ್ಣವಾಗಿ ತಿಳಿದುಕೊಳ್ಳುತ್ತೇನೆ. ಜಗದೀಶ್ ಶೆಟ್ಟರ್ ರಾಜೀನಾಮೆ ಪತ್ರ ಇನ್ನೂ ನನ್ನ ಕೈಗೆ ತಲುಪಿಲ್ಲ. ಜಗದೀಶ್ ಶೆಟ್ಟರ್ ರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡಿತ್ತು. ಕಾಂಗ್ರೆಸ್ಗೆ ದ್ರೋಹ ಮಾಡೋದಿಲ್ಲ ಎಂದು ಹೇಳಿದ್ದರು. ಎಲ್ಲರಿಗೂ ಆತ್ಮಸಾಕ್ಷಿ ಅನ್ನೋದು ಬೇಕು ಎಂದು ಕಿಡಿಕಾರಿದ್ದಾರೆ.
35 ಸಾವಿರ ಮತಗಳಿಂದ ಸೋತಾಗಲೂ ಶೆಟ್ಟರ್ ಹಿರಿಯರು ಎಂದು ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರನ್ನು ಗೌರವಯುತವಾಗಿ ನಡೆಸಿಕೊಂಡು ಸ್ಥಾನಮಾನ ಕೊಟ್ಟಿತ್ತು ಎಂದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ದೇಶದ ಹಿತಕ್ಕಾಗಿ ಬಿಜೆಪಿ ಸೇರ್ಪಡೆ ಆಗ್ತೀನಿ ಅಂತಾ ಹೇಳಿದ್ದಾರೆ. ಕಾಂಗ್ರೆಸ್ಗೆ ಸೇರುವಾಗ ಅವರಿಗೆ ದೇಶದ ಹಿತ ಗೊತ್ತಾಗಿರಲಿಲ್ವಾ? ರಾಜಕಾರಣಿಗಳು ರಾಜಕೀಯ ಮಾಡಬೇಕು. ಆದರೆ ಎಲ್ಲರಿಗೂ ಆತ್ಮಸಾಕ್ಷಿ ಅನ್ನೋದು ಬೇಕು. ನಿನ್ನೆಯ ತನಕ ಕಾಂಗ್ರೆಸ್ಗೆ ದ್ರೋಹ ಮಾಡೋದಿಲ್ಲ ಎಂದು ಹೇಳಿದ್ದರು ಎಂದು ಹೇಳಿಕೊಂಡಿದ್ದಾರೆ.