ನ್ಯೂಸ್ ನಾಟೌಟ್ : ಮಹಾಮಾರಿ ಕೊರೋನ ಕಾಲದಲ್ಲಿ ಅಂದರೆ ಎರಡು ವರ್ಷಗಳ ಹಿಂದೆ ಡೋಲೋ 650ಯ ಅಂಬಾಸಿಡರ್ ಎಂಬಂತೆ ತನ್ನ ಡೈಲಾಗ್ ಮೂಲಕವೇ ವೈರಲ್ ಆಗಿದ್ದ ಮೈಸೂರಿನ ಶಶಿರೇಖಾ ಇದೀಗಾ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸಲಿದ್ದಾರೆ ಎಂದು ವರದಿ ತಿಳಿಸಿದೆ.
‘ಎಂತದ್ದು ಇಲ್ಲಾ ಸರ್ ಬಿಸಿ ರಾಗಿ ಹಿಟ್ಟು, ಡೋಲೋ 650 ಮಾತ್ರೆ…’ ಎಂಬ ಡೈಲಾಗ್ ಮೂಲಕ ಕರ್ನಾಟಕದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದ್ದ ಶಶಿರೇಖಾ ಇದೀಗ ಸಿನಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಶಶಿರೇಖಾ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ವಿಭಿನ್ನವಾದ ವಿಡಿಯೋಗಳ ಮೂಲಕವೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1ಲಕ್ಷದ 75ಸಾವಿರ ಫಾಲೋವರ್ಸ್ ಗಳನ್ನು ಹೊಂದಿರುವ ಈಕೆಯ ನಟನೆಯನ್ನು ನೋಡಲು ಹಲವರು ಕಾಯುತ್ತಿದ್ದಾರೆ.
ಸದ್ಯ ಶಶಿರೇಖಾ ಸಿನಿಮಾ ಹೀರೋಯಿನ್ ಆಗುತ್ತಿರುವ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. TOXIC CAPTAIN ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.