ಮ್ಯಾನ್ಮಾರ್‌ ಉಗ್ರರ ಮೇಲೆ ಭಾರತ ಬಾಂಬ್‌ ದಾಳಿ! ಅಷ್ಟಕ್ಕೂ ಅಂದು ಅಲ್ಲೇನಾಯ್ತು..?

ನ್ಯೂಸ್ ನಾಟೌಟ್ : ಮ್ಯಾನ್ಮಾರ್‌ನಲ್ಲಿರುವ (Myanmar) ಉಗ್ರರ ಶಿಬಿರದ ಮೇಲೆ ಭಾರತ ಡ್ರೋನ್‌ (Drone) ಮೂಲಕ ಬಾಂಬ್‌ ದಾಳಿ (Bomb Attack) ನಡೆಸಿದೆ.ಭಾನುವಾರ(ಜ.7) ತನ್ನ ಶಿಬಿರದ ಮೇಲೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ ಎಂದು ಪರೇಶ್ ಬರುವಾ ನೇತೃತ್ವದ ಉಲ್ಫಾ-I ಹೇಳಿಕೊಂಡಿದೆ. ಭಾನುವಾರ ಸಂಜೆ 4:10, 4:12 ಮತ್ತು 4:20 ಕ್ಕೆ ಮೂರು ಬಾಂಬ್‌ಗಳನ್ನು ಡ್ರೋನ್‌ಗಳಿಂದ ಬೀಳಿಸಲಾಗಿದೆ. ದಾಳಿಯಿಂದ ಇಬ್ಬರು ಗಾಯಗೊಂಡಿದ್ದು, ಡ್ರೋನ್‌ ದಾಳಿಯನ್ನು ಭಾರತೀಯ ಭದ್ರತಾ ಪಡೆಗಳು ನಡೆಸಿವೆ ಎಂದು ಸಂಘಟನೆಯು ಹೇಳಿಕೊಂಡಿದೆ ಎನ್ನಲಾಗಿದೆ. ಮೊದಲ ಎರಡು ಸ್ಫೋಟಗಳಲ್ಲಿ ನಮ್ಮ ಸಂಘಟನೆಯ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರನೇ ಬಾಂಬ್ ಸ್ಫೋಟಿಸಲಿಲ್ಲ. ಈ ರೀತಿಯ ದಾಳಿಯಿಂದ ನಾವು ನಮ್ಮ ಉದ್ದೇಶದಿಂದ ವಿಚಲಿತಗೊಳ್ಳುವುದಿಲ್ಲ ಎಂದು ಹೇಳಿದೆ. ಭಾರತದ ವಿದೇಶಾಂಗ ಸಚಿವಾಲಯ ಇಲ್ಲಿಯವರೆಗೆ ಈ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.