ನ್ಯೂಸ್ ನಾಟೌಟ್ : ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡದ ದುಷ್ಪರಿಣಾಮಕ್ಕೆ ಏನೋ ಇತ್ತೀಚೆಗೆ ಕೆಟ್ಟ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬರುತ್ತಿರುವುದು ಖೇದಕರ ಸಂಗತಿ.ಹೌದು, ಇದಕ್ಕೆ ಉದಾಹರಣೆಯೆಂಬಂತೆ ಜೆಇಇ ಪರೀಕ್ಷೆಗೆ (JEE Examination) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Student Suicide) ಮಾಡಿಕೊಂಡ ಘಟನೆಯು ದೇಶದ ಕೋಚಿಂಗ್ ಹಬ್ (Coaching Center) ಆಗಿರುವ ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ನಡೆದಿದೆ.
ಕೋಟಾದಲ್ಲಿ ನಡೆಯುತ್ತಿರುವ ಎರಡನೇ ಆತ್ಮಹತ್ಯೆಯಾಗಿದ್ದು, ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿನ ಒತ್ತಡಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ.ನಿಹಾರಿಕಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.ಇದೀಗ ಡೆತ್ ನೋಟ್ ಸಿಕ್ಕಿತ್ತು ಭಾರಿ ವೈರಲ್ ಆಗಿದೆ.
18 ವರ್ಷದ ನಿಹಾರಿಕಾ ಅವರು ಕೋಟಾದ ಬೋರ್ಖೇಡಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ನಿಹಾರಿಕಾ ಅವರು ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(JEE) ತಯಾರಿ ನಡೆಸುತ್ತಿದ್ದರು. ನಿಹಾರಿಕಾ ತಾವಿದ್ದ ಮನೆಯಲ್ಲಿ ನೇಣು ಹಾಕಿಕೊಂಡಿದ್ದು,ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ.ಇದೀಗ ಮರಣೋತ್ತರ ಪರೀಕ್ಷೆ ಸೇರಿದಂತೆ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ನಿಹಾರಿಕಾ ಕೋಣೆಯಿಂದ ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ.
ಮಮ್ಮಿ, ಪಪ್ಪಾ ನನ್ನಿಂದ ಜೆಇಇ ಆಗಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಲೂಸರ್. ಕೆಟ್ಟ ಮಗಳು. ಸಾರಿ ಮಮ್ಮಿ, ಪಪ್ಪಾ. ಇದು ನನಗೆ ಉಳಿದ ಕೊನೆಯ ಆಯ್ಕೆ ಎಂದು ಡೆತ್ ನೋಟ್ನಲ್ಲಿ ನಿಹಾರಿಕಾ ಬರೆದಿದ್ದಾಳೆ.ನಿಹಾರಿಕಾ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದರು.ಅವರು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.ಸ್ಪರ್ಧಾತ್ಮಕ ಪರೀಕ್ಷೆಗಳ ತೀವ್ರ ಒತ್ತಡದಿಂದಾಗಿ ನಿಹಾರಿಕಾ 12 ನೇ ತರಗತಿಗೆ ಮತ್ತೊಮ್ಮೆ ದಾಖಲಾಗಿದ್ದರು. ಪರೀಕ್ಷೆಗಾಗಿ ದಿನನಿತ್ಯದ ಅಧ್ಯಯನದಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ವ್ಯಯಿಸಿದರೂ, ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಕೋಚಿಂಗ್ ವಿದ್ಯಾರ್ಥಿ ಮೊಹಮ್ಮದ್ ಜೈದ್ ಅವರ ಪ್ರಕರಣದ ರೀತಿಯಲ್ಲೇ ನಿಹಾರಿಕಾ ಆತ್ಮಹತ್ಯೆ ಇದೆ. ಉತ್ತರ ಪ್ರದೇಶ ಮೊರಾದಾಬಾದ್ ಮೂಲದ ಜೈದ್ ಅವರು ನೀಟ್ ಪ್ರವೇಶ ಪರೀಕ್ಷೆಗೆ ಸಜ್ಜಾಗುತ್ತಿದ್ದರು. ಆದರೆ, ಸವಾಲುಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು.