ದಕ್ಷಿಣ ಕನ್ನಡದ ಯಾವ-ಯಾವ ಶಾಲಾ-ಕಾಲೇಜುಗಳಿಗೆ ನಾಳೆ ಸ್ವಯಂ ಪ್ರೇರಿತ ರಜೆ..? ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಮಾಡಿದ ಮನವಿಯಲ್ಲೇನಿದೆ?

ನ್ಯೂಸ್ ನಾಟೌಟ್ : ಕೋಟ್ಯಾಂತರ ರಾಮ ಭಾರತೀಯರ ಪ್ರಾರ್ಥನೆಗೆ ನಾಳೆ ಮುಹೂರ್ತ ಸಿಗಲಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ನಾಳೆ(ಜನವರಿ 22ರಂದು) ನಡೆಯಲಿರುವ ಬಾಲ ರಾಮನ ಪ್ರತಿಷ್ಠಾಪನೆಗೆ ಈಗಾಗಲೇ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ರಜೆ ಘೋಷಿಸುವ ಕುರಿತು ಆಗ್ರಹ ಕೇಳಿಬಂದಿದ್ದು, ರಾಜಕೀಯ ಮೇಲಾಟಗಳು ಜೋರಾಗಿವೆ. ಆದರೆ ಕರ್ನಾಟಕದ ಕರಾವಳಿಯ ಪ್ರಮುಖ ಶಿಕ್ಷಣ ಸಂಸ್ಥೆಯೊಂದು ಜನವರಿ 22 ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಮತ್ತು ಕೆಲವು ಖಾಸಗಿ ಶಾಲೆ, ಕಾಲೇಜುಗಳು ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ. ಮಂಗಳೂರಿನ ಪ್ರಮುಖ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಸೋಮವಾರದಂದು ರಜೆ ಘೋಷಿಸಿ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನಿಟ್ಟೆ ವಿಶ್ವವಿದ್ಯಾಲಯ ಜನವರಿ 22ರಂದು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದೆ.ಅಲ್ಲದೇ, ಈಗಾಗಲೇ ರಜೆ ಘೋಷಣೆ ‌ಮಾಡುವಂತೆ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಮನವಿ ಮಾಡಿದೆ. ಆದರೆ ನಿಟ್ಟೆ ಸಂಸ್ಥೆಗೆ ಸಂಬಂಧಿಸಿದ ಜಸ್ಟೀಸ್ ಕೆಎಸ್ ಹೆಗ್ಡೆ ಆಸ್ಪತ್ರೆಯ ಸೇವೆಗಳು ಲಭ್ಯವಿರಲಿವೆ. ಇತ್ತ ಇಡೀ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಹಲವು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಈಗಾಗಲೇ ಸ್ವಯಂ ಪ್ರೇರಿತರಾಗಿ ಜನವರಿ 22ರ ಸೋಮವಾರ ಕೆಲ‌ ಖಾಸಗಿ ಶಾಲೆಗಳು ರಜೆ ಘೋಷಣೆ ಮಾಡಿವೆ.