- +91 73497 60202
- [email protected]
- November 22, 2024 11:21 PM
ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಬಾಲರಾಮ ಕಣ್ತೆರೆದು ಕೋಟ್ಯಾಂತರ ಭಕ್ತರಿಗೆ ಹೊಸಾ ದೃಷ್ಟಿ ನೀಡಿದ್ದಾನೆ. ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಎಲ್ಲೆಡೆ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಹುಣಸಿಕಟ್ಟೆ ಗ್ರಾಮದಲ್ಲಿನ ಮಸೀದಿಯಲ್ಲಿ ಭಾರತಾಂಬೆ ಹಾಗೂ ಶ್ರೀರಾಮನ ಮೂರ್ತಿಯನ್ನಿಟ್ಟು ಭಾವೈಕ್ಯತೆಯ ಸಂಕೇತವಾಗಿ ಪೂಜಿಸಲಾಯಿತು. ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಸೀದಿಯಲ್ಲಿ ಪೂಜೆ, ಹೋಮವನ್ನು ಮಾಡಲಾಗಿದೆ ಇದರಲ್ಲಿ ಮುಸ್ಲಿಂಮರೂ ಭಾಗಿಯಾಗಿದ್ದರು ಎಂದು ವರದಿ ತಿಳಿಸಿದೆ. ಹುಣಸಿಕಟ್ಟಿ ಗ್ರಾಮದ ಹಿಂದೂ- ಮುಸ್ಲಿಂ ಸಮುದಾಯದ ಮುಖಂಡರು ಸೇರಿ ಕಾರ್ಯಕ್ರಮವನ್ನು ಜಂಟಿಯಾಗಿ ನೆರವೇರಿಸಿದ್ದಾರೆ. ಮಸೀದಿಯ ಸುತ್ತಲೂ ಕೇಸರಿ ಹಾಗೂ ಹಸಿರು ಧ್ವಜಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮನ ಸಣ್ಣ ಮೂರ್ತಿಯನ್ನಿಟ್ಟು ಅಭಿಷೇಕ ಮಾಡಿ, ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಇನ್ನು ರಂಜಾನ್ ತಿಂಗಳಲ್ಲಿಯೂ ಕೂಡ ಈ ಮಸೀದಿಯಲ್ಲಿ ಆಲಿ ದೇವರ ಸಮ್ಮುಖದಲ್ಲಿ ಭಾರತ ಮಾತೆ ಫೋಟೋವನ್ನಿಟ್ಟು ಪೂಜೆ ಮಾಡಲಾಗುತ್ತದೆ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ