ನ್ಯೂಸ್ ನಾಟೌಟ್: ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಲ್ಲಿ ನಡೆಯುತ್ತಿರುವ ಹಲವು ಬದಲಾವಣಿಗಳು ಎಲ್ಲೆಡೆ ಸುದ್ದಿಯಾಗುತ್ತಿವೆ.
ಶ್ರೀರಾಮಚಂದ್ರನ ಪೂಜೆಗೆ ರಾಮ ಮಂದಿರದಿಂದ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಇಡೀ ಜಗತ್ತಿಗೆ ನೀಡಲಾಗುತ್ತಿದೆ
ರಾಮ ಮಂದಿರಕ್ಕೆ ಆಯ್ಕೆಯಾದ 24 ಅರ್ಚಕರಲ್ಲಿ 2 ಪರಿಶಿಷ್ಟ ಜಾತಿ ಮತ್ತು 1 ಹಿಂದುಳಿದ ವರ್ಗದವರು ಸೇರಿರುವುದು ಹಿಂದೂಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನೇ ಉಂಟುಮಾಡಲಿದೆ ಎಂದು ಹೇಳಲಾಗಿದೆ.
ರಾಮ ಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಆಯ್ಕೆಯಾದ ಅರ್ಚಕರಿಗೆ ಆಚರಣೆ ಮತ್ತು ಪೌರೋಹಿತ್ಯದ ತರಬೇತಿಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಕೇವಲ ಅರ್ಚಕರೊಂದೇ ಅಲ್ಲ, ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಒಬಿಸಿ ಅಂದರೆ ಹಿಂದುಳಿದ ವರ್ಗದವರೇ ಆಗಿದ್ದಾರೆ. ಅರ್ಚಕರ ನೇಮಕಾತಿಯಲ್ಲೂ SC ಮತ್ತು ಒಬಿಸಿ ವರ್ಗಕ್ಕೆ ಮನ್ನಣೆ ದೊರೆತಿರುವುದು ಭಾರತದ ಜಾತಿ ಪದ್ಧತಿಯಲ್ಲಿ ಹೊಸ ಬದಲಾವಣೆಯ ನಾಂದಿಗೆ ಮುನ್ನುಡಿ ಎಂದೇ ಹೇಳಲಾಗುತ್ತಿದೆ.
ಅಯೋಧ್ಯೆ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ, ಅರ್ಚಕರನ್ನು ಕೇವಲ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆಯೇ ಹೊರತು ಜಾತಿಯ ಆಧಾರದಲ್ಲಿ ಅಲ್ಲ. 2 ಪರಿಶಿಷ್ಟ-1 ಹಿಂದುಳಿದ ವರ್ಗ ಸೇರಿದಂತೆ 24 ಅರ್ಚಕರು ಪೂಜೆ ನೆರವೇರಿಸುತ್ತಾರೆ ಎಂದು ತಿಳಿಸಿದ್ದಾರೆ.