ನ್ಯೂಸ್ ನಾಟೌಟ್ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಕುಟುಂಬ ಸಮೇತರಾಗಿ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಹೊರಟ ಸಂಸೋಷವನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ದೇವೇಗೌಡರ ಕುಟುಂಬದ ಸದಸ್ಯರಾದ ಶ್ರೀಮತಿ ಚನ್ನಮ್ಮ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಟ ನಿಖಿಲ್ ಕುಮಾರಸ್ವಾಮಿ ಜೊತೆಗಿದ್ದರು.
ಅಯೋಧ್ಯೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ನಾನು ನನ್ನ ಪತ್ನಿ, ಕುಮಾರಸ್ವಾಮಿ, ನಿಖಿಲ್ ಅಯೋಧ್ಯೆಗೆ ಹೋಗ್ತಿದ್ದೇವೆ. “ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮ ಮಾಡ್ತಿರೋದು ಅವರ ಪೂರ್ವ ಜನ್ಮದ ಪುಣ್ಯದ ಫಲ. ಅವರಿಗೆ ಈ ಕೆಲಸ ಮಾಡೋ ಶಕ್ತಿಯೂ ಕೂಡ ಪೂರ್ವ ಜನ್ಮದ ಪುಣ್ಯದಿಂದಲೇ ಸಿಕ್ಕಿದೆ. ಮಾಜಿ ಪ್ರಧಾನಿ ವಾಜಪೇಯಿ ಕೂಡ 6 ವರ್ಷ ಪ್ರಧಾನಿ ಆಗಿದ್ದರು.
ಆದರೆ, ರಾಮ ಮಂದಿರದ ಮೊದಲ ಕಲ್ಲು ಸ್ವೀಕಾರ ಮಾಡೋಕು ಅವತ್ತು ವಾಜಪೇಯಿಗೆ ಕಷ್ಟ ಆಯ್ತು. ಇದು ಮೋದಿಯ ಪೂರ್ವ ಜನ್ಮ ಪುಣ್ಯವಾಗಿದೆ” ಎಂದು ಹೇಳಿದ್ದಾರೆ.
“ಮೋದಿಯವರಿಗೆ ಶಿವ, ವಿಷ್ಣು ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಶಿವ, ವಿಷ್ಣು ವ್ಯತ್ಯಾಸ ಇಲ್ಲ. ಹಿಂದಿನ ಜನ್ಮದಲ್ಲಿ ದೊಡ್ಡ ದೈವ ಭಕ್ತರಾಗಿ ಜನ್ಮ ತಾಳಿದ್ದರು ಅನ್ನಿಸುತ್ತದೆ. ಈ ಸಂಧರ್ಭದಲ್ಲಿ ಅ ಯೋಗ ಮೋದಿ ಅವರಿಗೆ ಬಂದಿದೆ. 11 ದಿನ ವೃತ ಮಾಡಿದ್ದಾರೆ. ಪುಣ್ಯ ಕ್ಷೇತ್ರಗಳ ಸ್ನಾನ ಮಾಡ್ತಿದ್ದಾರೆ. ಇದು ತುಂಬಾ ವಿಶೇಷವಾಗಿದೆ. ನಾನು ದೈವಭಕ್ತ. ಒಂದು ದಿನ ವ್ರತ ಮಾಡಬಹುದು. ಆದರೆ, ಹೀಗೆ ಮಾಡಲು ಆಗೊಲ್ಲ. ತಮ್ಮ ನಿತ್ಯದ ಕೆಲಸ ಕಾರ್ಯಕ್ರಮಗಳ ಜೊತೆ ವೃತ ಮಾಡ್ತಾರೆ. ಇದೊಂದು ದೊಡ್ಡ ವಿಶೇಷವಾಗಿದೆ. ಮೋದಿ ಅವರಿಗೆ ಇದು ಪೂರ್ವ ಜನ್ಮದ ಪುಣ್ಯ. ವಿಶ್ವದಲ್ಲಿ ಇದೊಂದು ದಾಖಲೆ” ಎಂದರು.
ಅಯೋಧ್ಯೆಯಲ್ಲಿ ಹಿಂದೂಗಳು ಮಾಡೋದು ಬಿಡಿ. ಮುಸ್ಲಿಂಮರು ಹೂವಿನ ಮಳೆ ಸುರಿಸುತ್ತಿದ್ದಾರೆ. ಯಾರು ಪ್ರೇರಣೆ ಮಾಡಿ ಇದನ್ನ ಮಾಡಿ ಅಂತ ಮುಸ್ಲಿಂಮರಿಗೆ ಹೇಳಿಲ್ಲ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ.