ರಾಮಮಂದಿರದಲ್ಲಿ ವಿರಾಜಮಾನನಾದ ಬಾಲರಾಮ, ರಾಮ ಭಕ್ತರ ಕಣ್ಣಂಚಲ್ಲಿ ಆನಂದ ಭಾಷ್ಪ

ನ್ಯೂಸ್ ನಾಟೌಟ್ : ಶತಮಾನಗಳ ಕನಸು ಕೊನೆಗೂ ಈಡೇರಿದೆ. ವರ್ಷಗಳ ಸಂಕಲ್ಪ ಕೊನೆಗೂ ನೆರವೇರಿದೆ. ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲ ರಾಮ ಜ.22ರ 12.30ಕ್ಕೆ ಸರಿಯಾಗಿ ಪ್ರತಿಷ್ಠಾಪನೆಗೊಂಡಿದ್ದಾನೆ. ಎಲ್ಲೆಲ್ಲೂ ಜೈ ಶ್ರೀರಾಮಘೋಷ (Jai Shree Ram) , ಎಲ್ಲಿ ನೋಡಿದ್ರೂ ಕೇಸರಿ ಮಯ. ರಾಮ ಭಕ್ತರ (Ram Devotees) ಕಣ್ಣಂಚಲ್ಲಿ ನೀರು ತುಂಬಿ ಹಲವರು ಭಾವುಕರಾದರು.ಹಿಂದೂಗಳ 50 ವರ್ಷಗಳ ಕನಸು ನೆರವೇರಿದೆ. ಪ್ರಧಾನಿ ಮೋದಿ (PM Modi) ನೇತೃತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಸಂಪೂರ್ಣ ವಾಗಿದೆ. ಶತಕೋಟಿ ಭಾರತೀಯರ ಶತಮಾನಗಳ ಕನಸು ಕೊನೆಗೂ ನೆರವೇರಿದೆ. ಬಾಲ ರಾಮನ ಆಗಮಿಸುವಿಕೆಗಾಗಿ ಅದೆಷ್ಟೋ ಮಂದಿ ಪ್ರತಿನಿತ್ಯ ಕಾದು ಕುಳಿತಿದ್ರು ಇಂದು ಆ ಕನಸು ನೆರವೇರಿದೆ. ಅದೆಷ್ಟೋ ಮಂದಿ ಮೌನ ವೃತ ಮಾಡಿದ್ರೆ, ಅದೆಷ್ಟೋ ಮಂದಿ ಉಪವಾಸ ಮಾಡುತ್ತಾ ರಾಮನಿಗಾಗಿ ಕಾದು ಕುಳಿತಿದ್ರು. ಕೊನೆಗೂ ರಾಮ ಬಂದೇ ಬಿಟ್ಟಿದ್ದಾನೆ. ಇದಕ್ಕಿಂತ ಮತ್ತೊಂದು ಖುಷಿ ಇಲ್ಲ ಅಂದ್ರೆ ತಪ್ಪಾಗಲ್ಲ. ರಾಮ ಬರುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಏನೆಲ್ಲಾ ಆಯ್ತು ಅಂತ ಪ್ರತಿಯೊಬ್ಬ ಭಾರತೀಯನಿಗೂ ಚೆನ್ನಾಗಿ ಗೊತ್ತಿದೆ. ಕೇವಲ ಅಯೋಧ್ಯೆ ಮಾತ್ರವಲ್ಲ ಇಡೀ ವಿಶ್ವವೇ ಬಾಲ ರಾಮ ಬಂದಿದ್ದಕ್ಕೆ ಖುಷಿ ಪಟ್ಟಿದ್ದಾರೆ. ವಿದೇಶಗಳಲ್ಲಿ ಇದ್ರೂ ಅಲ್ಲೇ ಹಬ್ಬದಂತೆ ಸಂಭ್ರಮಿಸಿದ್ದಾರೆ.