- +91 73497 60202
- [email protected]
- November 22, 2024 1:17 PM
ರಾಹುಲ್ ಗಾಂಧಿಯನ್ನು ದೇವಾಲಯ ಪ್ರವೇಶಕ್ಕೆ ತಡೆದದ್ದೇಕೆ..? ಧರಣಿ ಕುಳಿತ ರಾಹುಲ್
ನ್ಯೂಸ್ ನಾಟೌಟ್ : 15ನೇ ಶತಮಾನದ ಸಂತ ಹಾಗೂ ವಿದ್ವಾಂಸ ಶ‍್ರೀಮಂತ ಶಂಕರದೇವರ ಜನ್ಮಸ್ಥಳವಾದ ಅಸ್ಸಾಂ ನ ಬತದ್ರವ ಸತ್ರ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅಸ್ಸಾಂ ಸರ್ಕಾರಿ ಪ್ರಾಧಿಕಾರಗಳು ನನ್ನನ್ನು ತಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಗಾಂವ್ ನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ. ತಮ್ಮ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, “ನಮಗೆ ದೇವಾಲಯಕ್ಕೆ ಭೇಟಿ ನೀಡಬೇಕಿದೆ. ನಾನು ದೇವಾಲಯಕ್ಕೆ ಭೇಟಿ ನೀಡದಿರಲು ನಾನು ಯಾವ ಅಪರಾಧ ಮಾಡಿದ್ದೇನೆ?” ಎಂದು ಪ್ರಶ್ನಿಸಿದ್ದಾರೆ. “ನಮಗೆ ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದು ಬೇಕಿಲ್ಲ. ನಮಗೆ ದೇವಾಲಯದಲ್ಲಿ ಪ್ರಾರ್ಥನೆ ಮಾತ್ರ ಸಲ್ಲಿಸಬೇಕಿದೆ” ಎಂದೂ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.ಈ ಘಟನೆಯ ಬೆನ್ನಿಗೇ ರಾಹುಲ್ ಗಾಂಧಿ ನಾಗಾಂವ್ ನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೂ ಮುನ್ನ, ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತೀವ್ರ ಸ್ವರೂಪದ ಗಲಭೆಯಾಗುವ ಸಾಧ್ಯತೆ ಇರುವುದರಿಂದ ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯ ಮಾರ್ಗವನ್ನು ಮರು ಪರಿಶೀಲಿಸಬೇಕು ಎಂದು ರವಿವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದರು ಎನ್ನಲಾಗಿದೆ. ಕೋಮು ಗಲಬೆ ಏಳುವ ಮುಸ್ಸೂಚನೆ ಇದ್ದ ಕಾರಣ ರಕ್ಷಣೆಗಾಗಿ ಅವರನ್ನು ಹೋಗುವುದನ್ನು ತಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ