ನ್ಯೂಸ್ ನಾಟೌಟ್ : ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಹಿಂದೆ ಭಾರತದ ಏಜೆಂಟರು ಇದ್ದಾರೆ ಎಂಬ ಕೆನಡಾ ಆರೋಪದ ಬೆನ್ನಲೇ, ಕಳೆದ ವರ್ಷ ಪಾಕಿಸ್ತಾನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಉಗ್ರರ ಸಾವಿಗೆ ಭಾರತೀಯ ಏಜೆಂಟರು ಕಾರಣ ಎಂದು ಪಾಕಿಸ್ತಾನ ಆರೋಪಿಸಿತ್ತು. ಈಗ ಈ ಆರೋಪಕ್ಕೆ ಮತ್ತಷ್ಟು ಪುರಾವೆಗಳು ದೊರೆತಿದ್ದು ಹಲವು ಸ್ಪೋಟಕ ಮಾಹಿತಿಗಳ ಬಹಿರಂಗವಾಗಿವೆ.
ಪುರಾವೆ ಇದೆ ಎಂದು ಹೇಳಿಕೊಂಡ ಪಾಕ್ ತನಿಖಾ ಸಂಸ್ಥೆ ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
‘ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಅನಾಮಿಕ ವ್ಯಕ್ತಿಗಳಿಂದ ಹತರಾದ ಇಬ್ಬರು ಉಗ್ರರ ಸಾವಿಗೆ ಭಾರತದ ಏಜೆಂಟ್ಗಳಾದ ಯೋಗೇಶ್, ಅಶೋಕ್ ಕುಮಾರ್ ಕಾರಣ ಹೇಳಿದ್ದಾರೆ. ಈ ಸಂಬಂಧ ಬಿಡುಗಡೆ ಮಾಡಲಾದ ಆಧಾರ್ ದಾಖಲೆಗಳಲ್ಲಿ ಅಶೋಕ್ ಕುಮಾರ್ ಆನಂದ್ ಎಂಬವರ ವಿಳಾಸ ಮಂಗಳೂರಿನದ್ದಾಗಿದೆ.
ಯೋಗೇಶ್ ವಿಳಾಸ ರಾಜಸ್ಥಾನದ್ದಾಗಿದೆ. ಇವರಿಬ್ಬರೂ ಸೆಪ್ಟೆಂಬರ್ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಉಗ್ರ ರಿಯಾಜ್ ಅಹ್ಮದ್ ಹಾಗೂ ಅಕ್ಟೋಬರ್ನಲ್ಲಿಸಿಯಾಲ್ ಕೋಟ್ನಲ್ಲಿ ಜೈಷ್ ಉಗ್ರ ಶಾಹಿದ್ ಲತೀಫ್ ರನ್ನು ಮೊಹಮ್ಮದ್ ಉಮ್ಮೇರ್ ಎಂಬುವರಿಂದ ಹತ್ಯೆ ಮಾಡಿಸಿದ್ದರು ಎಂದು ಪಾಕಿಸ್ತಾನ ಆರೋಪಿಸಿದೆ.
ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ, ಪಾಕಿಸ್ತಾನಕ್ಕೆ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿ ಎಚ್ಚರಿಕೆ ನೀಡಿವೆ. ಪಾಕಿಸ್ತಾನ ತಾನು ಮಾಡಿದ ತಪ್ಪನ್ನು ಮುಚ್ಚಿಡಲು ಬೇರೆಯವರನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದ್ದಾರೆ.