- +91 73497 60202
- [email protected]
- November 22, 2024 8:22 PM
ನ್ಯೂಸ್ ನಾಟೌಟ್ : ಮುಸ್ಲಿಮರ ಏರಿಯಾದಲ್ಲಿ ಶ್ರೀ ರಾಮನ ಮಂತ್ರಾಕ್ಷತೆ ವಿತರಣೆ ಮಾಡಲುವ ತೆರಳಿದ ವೇಳೆ ಗಲಾಟೆ ನಡೆದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ವಾರ್ಡ್ ನಂಬರ್ ೮ರಲ್ಲಿ ವರದಿಯಾಗಿದೆ. ಗಲಾಟೆ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಹಿಂದುಗಳು ಅದೇ ಪ್ರದೇಶದಲ್ಲಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ತೆರಳಿ ಸವಾಲು ಹಾಕಿದ್ದಾರೆ ಎನ್ನಲಾಗಿದೆ.ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕೆಲವು ಹಿಂದೂ ಯುವಕರು ಮನೆ ಮನೆಗೆ ಮಂತ್ರಾಕ್ಷತೆ ಹಂಚುವ ಕೆಲಸ ಮಾಡುತ್ತಿದ್ದರು. ಶುಕ್ರವಾರ(ಜ.20) ರಂದು ವಿಜಯಪುರದ ಎಂಟನೇ ವಾರ್ಡ್‌ನಲ್ಲಿ ಮಂತ್ರಾಕ್ಷತೆ ಹಂಚುತ್ತಿದ್ದ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಹ* ಲ್ಲೆ ನಡೆಸಿದ್ದಾರೆ ಎಮದು ಆರೋಪಿಸಲಾಗಿದೆ. ಅಧಿಕ ಮುಸ್ಲಿಂ ಜನಸಂಖ್ಯೆ ಆ ಎರಿಯಾದಲ್ಲಿ ಇದ್ದ ಕಾರಣ ಹೀಗಾಗಿ ಈ ಏರಿಯಾದಲ್ಲಿ ಘೋಷಣೆ ಕೂಗಬೇಡಿ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಇದನ್ನು ಕೇಳಿದ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಸಿಟ್ಟಿಗೆದ್ದು ಶನಿವಾರ ಇದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಗಿ ಮಂತ್ರಾಕ್ಷತೆ ಹಂಚಲು ನಿರ್ಧರಿಸಿದ್ದಾರೆ. ಅದಕ್ಕೆ ಪೂರಕವಾಗಿ ದೇವರಹಿಪ್ಪರಗಿ ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳು ದೊಡ್ಡ ಜಾಥಾ ನಡೆಸಿವೆ. ಹಿಂದೂ ಯುವಕರ ಮೇಲಿನ ದಾಳಿ ಕುರಿತು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಕಾರ್ಯಕರ್ತರು ಶನಿವಾರ ದೇವರ ಹಿಪ್ಪರಗಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ನಗರದ ಕೆಲವು ಕಡೆ ಜಾಥಾಗಳು ನಡೆದವು. ಅದರ ನಡುವೆ ಶನಿವಾರ ಸಂಜೆ ಪೊಲೀಸ್ ಭದ್ರತೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಂದುಗಳು ಸೇರಿ ವಾರ್ಡ್ ನಂಬರ್ 8ರಲ್ಲೇ ಮಂತ್ರಾಕ್ಷತೆ ಹಂಚಿದ್ದಾರೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ