ನ್ಯೂಸ್ ನಾಟೌಟ್: ಸದ್ಯ ಇದೀಗ ಇಂಟರ್ನೆಟ್ ಯುಗ ಆಗ್ಬಿಟ್ಟಿದೆ.ಕ್ಷಣ ಕ್ಷಣದ ಮಾಹಿತಿ ಪಡೆಯಬೇಕೆಂದ್ರೆ ಇಂಟರ್ನೆಟ್ ಅವಶ್ಯಕತೆ ಇದ್ದೇ ಇದೆ.ಹೀಗಾಗಿ ಮೊಬೈಲ್ ಜತೆಗೆ ಇಂಟರ್ನೆಟ್ ಕೂಡ ಅನಿವಾರ್ಯವಾಗಿ ಬಿಟ್ಟಿದೆ.ಎಲ್ಲಾ ಕೆಲಸಗಳಿಗೂ ಡೇಟಾ ಬೇಕಾಗಿ ಬರುವ ಕಾರಣ ಪ್ರತಿಯೊಬ್ಬರು ತಿಂಗಳಿಗೆ ಇಂತಿಷ್ಟು ಎಂದು ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದ್ರೆ ಇದೀಗ ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಕಡಿಮೆ ಬೆಲೆಯಲ್ಲಿ ಜಿಯೋ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾಗಿದೆ. ಇದು ಕಳೆದ ಹಲವಾರು ವರ್ಷಗಳಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಹಲವು ಪ್ಲಾನ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.ಭಾರತೀಯ ಗ್ರಾಹಕರ ಅಚ್ಚು ಮೆಚ್ಚಿನ ಹಾಗೂ ಬಹಳ ಹತ್ತಿರ ಎಂದೆನಿಸುವ ಜಿಯೋ ಅಗತ್ಯತೆಗಳನ್ನು ಪೂರೈಸಲು ಹಲವಾರು ಕೈಗೆಟುಕುವ ಯೋಜನೆಗಳನ್ನು ಪ್ರಾರಂಭಿಸುವುದರೊಂದಿಗೆ ಭಾರತೀಯರು ಇಂಟರ್ನೆಟ್ನ್ನು ಬಳಸುವ ವಿಧಾನವನ್ನು ಕ್ರಾಂತಿಗೊಳಿಸಿದೆ.
ಭಾರತದಲ್ಲಿ ಇಂಟರ್ನೆಟ್ ಬಳಕೆಯು ಹೆಚ್ಚುತ್ತಿರುವ ಹಾಗೆಯೇ, ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ತನ್ನ ಕೆಲವು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ನೀಡುತ್ತಿದೆ. ರಿಲಯನ್ಸ್ ಜಿಯೋ 399 ರೂ. ಯೋಜನೆಯೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 6GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಪ್ರತ್ಯೇಕವಾಗಿ 6GB ಡೇಟಾದೊಂದಿಗೆ ಪ್ಲಾನ್ ಖರೀದಿಸಿದರೆ, ಅದರ ಬೆಲೆ ಕೇವಲ 61 ರೂಪಾಯಿ ಆಗಿರುತ್ತದೆ. 399 ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಇದು ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು 3GB ದೈನಂದಿನ ಡೇಟಾವನ್ನು ಒಳಗೊಂಡಿದೆ.
ಇದು JioTV, JioCinema, JioCloud, ಮತ್ತು ಅನಿಯಮಿತ 5G ಡೇಟಾದಂತಹ ಸೌಲಭ್ಯ ಸಹ ನೀಡುತ್ತದೆ.ಇದಲ್ಲದೆ, ಜಿಯೋ 219 ರೂ. ಯೋಜನೆಯೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 2GB ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ 14 ದಿನಗಳು ಮತ್ತು ಇದು JioTV, JioCinema, JioCloud ಮತ್ತು ಅನಿಯಮಿತ 5G ಡೇಟಾದಂತಹ 399 ರೂ. ಪ್ಲಾನ್ನ ಅದೇ ಪ್ರಯೋಜನಗಳನ್ನು ಒಳಗೊಂಡಿದೆ.ಒಟ್ಟಿನಲ್ಲಿ ಜಿಯೋ ಗ್ರಾಹಕರಿಗಿದು ಹಬ್ಬ.ಈ ಹೊಸ ಸೌಲಭ್ಯದಿಂದ ಇಂಟರ್ನೆಟ್ ದರ ದುಬಾರಿಯಾಗಿದೆ ಎನ್ನುವವರು ಸದ್ಯ ನಿರಾಳರಾಗಿದ್ದಾರೆ.