ನ್ಯೂಸ್ ನಾಟೌಟ್ : ಮಂಡ್ಯದಲ್ಲಿ ಲವ್ ಜಿಹಾದ್ (Love Jihad) ನಡೆಸಲಾಗುತ್ತಿದೆ ಎನ್ನುವ ಆರೋಪದಡಿ ರೊಚ್ಚಿಗೆದ್ದಿರುವ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಂಡ್ಯದ (Mandya news) ಕೆ.ಆರ್.ಪೇಟೆ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು.
ಕೆ.ಆರ್.ಪೇಟೆ ಪಟ್ಟಣದ 15 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯ ಜೊತೆ ಅದೇ ಊರಿನ ಪಟ್ಟಣದ 19 ವರ್ಷದ ಯುವಕ ಸೈಯದ್ ತಬ್ರೀಜ್ ಎಂಬಾತ ಸಲಿಗೆ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಪ್ರೀತಿಯ ಹೆಸರಿನಲ್ಲಿ ಈತ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂಬುದು ಹಿಂದೂ ಸಂಘಟನೆಗಳ ಆರೋಪವಾಗಿದ್ದು ಪ್ರತಿಭಟನೆಗೆ ಮುಂದಾದರು.
ಇಬ್ಬರೂ ಕೂಡ ಅಪ್ರಾಪ್ತ ವಯಸ್ಸಿನವರೇ ಆಗಿದ್ದು, ಬಾಲಕಿ ಪೋಷಕರಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿದೆ. ದೂರಿನ ಬಳಿಕ ಪಟ್ಟಣ ಪೊಲೀಸರು ಬಾಲಕಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಕರೆ ತಂದಿದ್ದಾರೆ.ಇದಾದ ಬಳಿಕ ಹಿಂದೂ ಸಂಘಟನೆಗಳಿಂದ ಠಾಣೆ ಮುಂದೆ ಪ್ರತಿಭಟನೆ ನಡೆದಿದೆ. ಈ ಪ್ರಕರಣದ ಹಿಂದೆ ಅನ್ಯ ಕೋಮಿನವರು ಲವ್ ಜಿಹಾದ್ಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಟಾರ್ಗೆಟ್ ಆಗುತ್ತಿದೆ.ಪ್ರಕರಣವನ್ನು NIAಗೆ ವಹಿಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಬಂದಿದೆ.ಬಾಲಕಿಯನ್ನು ಕರೆದೊಯ್ದ ಅಪ್ರಾಪ್ತ ಬಾಲಕನ ವಿರುದ್ಧ ಪೊಲೀಸರಿಂದ ಪೋಸ್ಕೋ ಪ್ರಕರಣ ದಾಖಲಾಗಿದೆ.