ನ್ಯೂಸ್ ನಾಟೌಟ್: ಕಿರುತೆರೆ ನಟಿ ವಿ.ಜೆ. ಮಹಾಲಕ್ಷ್ಮೀ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ವಿವಾಹವಾಗುವ ಮೂಲಕವಾಗಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಕೆಲವು ದಿನಗಳ ಹಿಂದೆಯಷ್ಟೇ ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಇತ್ತ ಮಹಾಲಕ್ಷ್ಮೀ ಸಂಭ್ರಮದಿಂದ ಸಂಕ್ರಾಂತಿ ಸಲೆಬ್ರೆಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ.
ರವೀಂದರ್ ಅವರಿಗೆ ಉಸಿರಾಟದ ಸಮಸ್ಯೆಯಿದ್ದು, ಕಳೆದ ಒಂದು ವಾರದಿಂದ ಐಸಿಯುನಲ್ಲಿ ಕಳೆದಿದ್ದಾರೆ. ಆಕ್ಸಿಜನ್ ಮಾಸ್ಕ್ ಹಾಕಿಕೊಂಡೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಏನಾಯಿತು ರವಿಂದರ್ಗೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ದಡೂತಿ ದೇಹದಿಂದಾಗಿ ರವೀಂದರ್ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.ಹೀಗಾಗಿ ಪತಿ ಆರೋಗ್ಯ ಸ್ಥಿತಿಯನ್ನು ಕಂಡು ಮಹಾಲಕ್ಷ್ಮೀ ಚಿಂತೆಗೆ ಜಾರಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳು ಅವೆಲ್ಲವನ್ನು ಉಲ್ಟಾ ಪಲ್ಟಾ ಮಾಡಿವೆ.
ಈ ಕುರಿತಂತೆ ಪೋಸ್ಟ್ ಮಾಡಿರುವ ಮಹಾಲಕ್ಷ್ಮಿ ಅವರು “ನಿಮ್ಮ ಪೊಂಗಲ್ ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಕ್ಷಣಗಳ ಉತ್ಸಾಹದಿಂದ ಕೂಡಿರಲಿ ,ಎಲ್ಲರಿಗೂ ಪೊಂಗಲ್ ಶುಭಾಶಯಗಳು” ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇನ್ನು ಮಹಾಲಕ್ಷ್ಮಿ ಅವರು ಪೊಂಗಲ್ ಸಂಭ್ರಮಿಸಲು ವಧುವಿನ ಕೊರ್ವೈ ರೇಶ್ಮಿ ಸಿಲ್ಕ್ ಸೀರೆಯನ್ನು ಧರಿಸಿದ್ದಾರೆ. ಈ ವೇಳೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ಇದರಲ್ಲಿ ಮಹಾಲಕ್ಷ್ಮೀ ಲಕ್ಷ್ಮೀ ತರಹ ಕಂಡು ಬಂದಿದ್ದು,ಸೀರೆಯು ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇಷ್ಟೆಲ್ಲಾ ಉಟ್ಟು ಟ್ರೋಲ್ಗೆ ಒಳಗಾಗಿದ್ದರು. ಮಹಾಲಕ್ಷ್ಮಿ ಅವರ ಪೋಸ್ಟ್ನಿಂದ, ರವೀಂದ್ರ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ರವೀಂದ್ರ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆಯೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.