ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೆ ಗ್ಯಾರೆಂಟಿ ಸ್ಥಗಿತ ಮಾಡುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನನ್ನ ಹೇಳಿಕೆಯಲ್ಲಿ ತಪ್ಪೇನಿದೆ, ಯಾಕೆ ವಿವಾದ ಮಾಡ್ತೀರಿ. ಯಾವುದೇ ಕಾರ್ಯಕ್ರಮಗಳನ್ನ ಕೊಟ್ಟರೆ ಪ್ರತಿಫಲ ಅದೇ ಪಕ್ಷಕ್ಕೆ ಸಿಗಬೇಕಲ್ವಾ? ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ (Development) ನೀಡಿ ಅಂತ ಹೇಳಿದ್ದೇನೆ ಅಷ್ಟೇ ಎಂದು ವಿವಾದದ ಬಳಿಕ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಗ್ಯಾರಂಟಿ ಯೋಜನೆ ಬಂದ್ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿ ಮಾತನಾಡಿದ ಕಾಂಗ್ರೆಸ್ ಶಾಸಕರು, ನನ್ನ ಹೇಳಿಕೆಯಲ್ಲಿ ತಪ್ಪೇನಿದೆ, ಯಾಕೆ ವಿವಾದ ಮಾಡ್ತೀರಿ. ಯಾವುದೇ ಕಾರ್ಯಕ್ರಮಗಳನ್ನ ಕೊಟ್ಟರೆ ಪ್ರತಿಫಲ ಅದೇ ಪಕ್ಷಕ್ಕೆ ಸಿಗಬೇಕಲ್ವಾ? ನಾವು ಗ್ಯಾರೆಂಟಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇವು ಅಂತ ಇವರು ಈಗ ಅಕ್ಷತೆ ಕೊಟ್ಟು ಲೋಕಸಭೆಗೆ ವೋಟ್ ಹಾಕಿಸಿಕೊಳ್ಳಲು ಹೊರಟಿದ್ದಾರೆ ಎಂದು ಬಿಜೆಪಿ ಮೇಲೆ ಟೀಕೆ ಮಾಡಿದ್ದಾರೆ.
ಆದರೆ, ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರೆಂಟಿಗಳನ್ನ ಜಾರಿ ಮಾಡಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ ನೀಡಿ ಅಂತ ಹೇಳಿದ್ದೇನೆ. ಗ್ಯಾರೆಂಟಿಗಳನ್ನ ಐದಲ್ಲ ಹತ್ತು ವರ್ಷ ಮುಂದುವರೆಸುತ್ತೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನ ಶಕ್ತಿ ತುಂಬಬೇಕಲ್ವಾ? ಮಂತ್ರಾಕ್ಷತೆಗೆ ಮತ ಹಾಕ್ತಿರೋ, ಗ್ಯಾರೆಂಟಿಗಳಿಗೆ ಹಾಕ್ತಿರೋ ನೀವೆ ತೀರ್ಮಾನ ಅಂತ ಹೇಳಿದ್ದೇನೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.