ನ್ಯೂಸ್ ನಾಟೌಟ್ : ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಬಹು ನಿರೀಕ್ಷಿತ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಇದೇ ತಿಂಗಳ 22ಕ್ಕೆ ಅದ್ದೂರಿಯಾಗಿ ನಡೆಯಲಿದೆ. ಕೋಟ್ಯಂತರ ಭಾರತೀಯರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ.
ರಾಮಮಂದಿರ ತೆರೆಯುವ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 300 ಸ್ಥಳಗಳಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ವರದಿಯ ಪ್ರಕಾರ, ಅಯೋಧ್ಯೆ ಪ್ರತಿಷ್ಠಾ ದಿನದಂದು ಆಹಾರದ ವೆಚ್ಚ ಬರೋಬ್ಬರಿ 50 ಕೋಟಿಗೂ ಹೆಚ್ಚು ಇದೆ ಎಂದು ಅಂದಾಜಿಸಲಾಗಿದೆ.ಈ ಎಲ್ಲಾ ವೆಚ್ಚವನ್ನು ತೆಲುಗಿನ ಖ್ಯಾತ ನಟ ಪ್ರಭಾಸ್ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.ಈ ಮೂಲಕ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರಿಗೆ ಔತಣವನ್ನು ಏರ್ಪಡಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ .
ಪ್ರಭಾಸ್ ಓರ್ವ ಅದ್ಭುತ ನಟ. ಅದಕ್ಕೂ ಮಿಗಿಲಾಗಿ ಅವರಲ್ಲಿ ಒಳ್ಳೆಯ ಗುಣಗಳಿವೆ.ಅವರು 50 ಕೋಟಿ ರೂ. ಖರ್ಚು ಮಾಡಿ ಅನ್ನದಾನ ಮಾಡುವುದರ ಮೂಲಕ ಪ್ರಭಾಸ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.