ನ್ಯೂಸ್ ನಾಟೌಟ್: ಸಬ್ ಜೂನಿಯರ್ ಸೆಸ್ಟೊ ಬಾಲ್ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕೆವಿಜಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುಪ್ರಿತಾ ಎಂ.ಆರ್ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದೆ.
ಸುಳ್ಯದ ಪ್ರತಿಷ್ಠಿತ ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ಜಿಎನ್ ಎಂ ವಿದ್ಯಾರ್ಥಿನಿ ಸುಪ್ರಿತಾ ಮೂಲತಃ ಕೊಡಗಿನ ಕುಶಾಲನಗರದವರು. ಅವರು ಇತ್ತೀಚೆಗೆ ಪಂಜಾಬ್ ನ ಧೂರಿ ದೇಶ್ ಭಗತ್ ಕಾಲೇಜಿನಲ್ಲಿ ನಡೆದ 18 ವರ್ಷದೊಳಗಿನ ವಿಭಾಗದ ಕೂಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಇವರೊಂದಿಗೆ ರಾಜ್ಯದ ವಿವಿಧ ಭಾಗದ ಸ್ಪರ್ಧಿಗಳು ಕೂಡ ಆಯ್ಕೆಯಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಅವರಲ್ಲಿ ಸುಪ್ರಿತಾ ಕೂಡ ಒಬ್ಬರು ಅನ್ನೋದು ವಿಶೇಷ.
ಇವರಿಗೆ ಜಾನ್ಸನ್ ಕುಶಾಲನಗರ ತರಬೇತಿ ನೀಡಿದ್ದರು. ಈ ಹಿಂದೆ ಜನವರಿಯಲ್ಲಿ ಬಿಹಾರದಲ್ಲಿ ನಡೆದಿದ್ದ ಫೆಡರೇಷನ್ ಕಪ್ ಅಂತರ್ ರಾಜ್ಯ ಸೆಸ್ಟೊ ಬಾಲ್ ಕ್ರೀಡಾಕೂಟದಲ್ಲಿ ಇವರನ್ನೊಳಗೊಂಡ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಮಾತ್ರವಲ್ಲ 2022ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಕೂಟದಲ್ಲಿ ಇವರನ್ನೊಳಗೊಂಡ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು. ವಿದ್ಯಾರ್ಥಿನಿಗೆ ಕೆವಿಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಾವತಿ ಕೆ.ಎಸ್ ಇವರು ವಿಶೇಷ ಕಾಳಜಿವಹಿಸಿ ಪ್ರೋತ್ಸಾಹ ನೀಡಿದ್ದರು.