ನ್ಯೂಸ್ ನಾಟೌಟ್ : ಮಡಿಕೇರಿ ಸಮೀಪದ ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಅಉಮಾರು 1 ಲಕ್ಷ ರೂ.ಗಳಿಗೂ ಅಧಿಕ ನಗದನ್ನು ಕಳ್ಳರು ಕದ್ದೊಯ್ದ ಘಟನೆ ವರದಿಯಾಗಿದೆ.ಸದ್ಯ ಈ ಘಟನೆ ವರ್ತಕರು ಹಾಗೂ ಅಲ್ಲಿನ ನಿವಾಸಿಗಳ ತಲೆನೋವಿಗೆ ಕಾರಣವಾಗಿದೆ.
ಅಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರೋ ಪಟ್ಟಣದ ಹೃದಯ ಭಾಗದಲ್ಲಿರುವ ಬಟ್ಟೆ ಅಂಗಡಿಯ ಮುಂಭಾಗದ ಬಾಗಿಲು ಮುರಿದು ಕಳ್ಳರು ರಾಜಾರೋಷವಾಗಿ ಒಳನುಗ್ಗಿದ್ದಾರೆ. ಮಾತ್ರವಲ್ಲ 1 ಲಕ್ಷ ರೂ. ನಗದು, ಕೆಲವು ಬಟ್ಟೆಗಳು ಮತ್ತು ಕನ್ನಡಕಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದಕ್ಕೂ ಮೊದಲು ಸುರೇಶ್ ಕುಶಾಲಪ್ಪ ಅವರಿಗೆ ಸೇರಿದ ಹೊಗೆ ನಿಯಂತ್ರಣ ಕೇಂದ್ರದಲ್ಲಿ ನಿಲ್ಲಿಸಿದ್ದ ಬೈಕನ್ನು ಚೋರರು ಕದ್ದೊಯ್ದಿದ್ದರು. ಅನಂತರ ಬಸ್ ನಿಲ್ದಾಣದಲ್ಲಿರುವ ಪೆಟ್ರೋಲ್ ಬಂಕ್ಗೆ ನುಗ್ಗಿ ಹಣ ಸಿಗದೇ ಇದ್ದಾಗ ಎರಡು ಪ್ಯಾಕೇಟ್ ವಾಹನದ ಆಯಿಲ್ ಅನ್ನು ತೆಗೆದುಕೊಂಡಿದ್ದು, ಅಲ್ಲೇ ಇದ್ದ ಸಿಸಿ ಕೆಮರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ.
ಇಬ್ಬರು ಮುಸುಕುಧಾರಿಗಳು ಇರುವುದು ಕಂಡು ಬಂದಿದ್ದು, ಪಕ್ಕದಲ್ಲಿದ್ದ ಹಾಲಿನ ಡೈರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು 2 ಸಾವಿರ ರೂ.ಗಳನ್ನು ಕದ್ದೊಯ್ದಿದ್ದಾರೆ.ಮಾತ್ರವಲ್ಲ ಮೆಡಿಕಲ್ಸ್ವೊಂದರ ಮಾಲಕ ಕೆ.ಪಿ.ಜಗನ್ನಾಥ್ ಅವರ ಹಳೆಯ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಏನೂ ಸಿಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.ಕಳ್ಳತನ ನಡೆದ ಸ್ಥಳಕ್ಕೆ ಅಪರಾಧ ಪತ್ತೆ ದಳದ ಪೊಲೀಸ್ ಅಧಿಕಾರಿ ಸ್ವಾಮಿ ಹಾಗೂ ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಸುಕುಧಾರಿ ಚೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಶೀಘ್ರವೇ ಬಂಧಿಸುವ ಭರವಸೆಯನ್ನೂ ನೀಡಿದ್ದಾರೆ.