ನ್ಯೂಸ್ ನಾಟೌಟ್: ಹೊಸ ವರ್ಷದ ಸಂತಸದಲ್ಲಿದ್ದ ಜಪಾನ್ ದೇಶದಲ್ಲಿ ಮತ್ತೆ ಸುನಾಮಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದರ ಭಾಗವೆಂಬಂತೆ ಸೋಮವಾರ(ಡಿ.1) ಉತ್ತರ ಮಧ್ಯ ಜಪಾನ್ ಅಧಿಕ ತೀವ್ರತೆಯ ಭೂಕಂಪ ಸಂಭವಿಸಿದೆ.
ಜಪಾನ್ನ ಉತ್ತರ ಮಧ್ಯ ಭಾಗದಲ್ಲಿ ಸೋಮವಾರ ಬೆಳಗ್ಗೆ 7.6ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ಆಗಿದೆ. ಇಲ್ಲಿನ ಇಶಿಕಾವಾ, ನಿಗಾಟಾ ಹಾಗೂ ಟೊಯಾಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಲ್ಲಿ ಪಶ್ಚಿಮ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದೆ. ಇದರ ಬೆನ್ನಲ್ಲೆ ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದೆ.
ಜಪಾನ್ ಹವಾಮಾನ ಸಂಸ್ಥೆಯು ಇಶಿಕಾವಾ ಮತ್ತು ಹತ್ತಿರದ ಪ್ರಾಂತಗಳಲ್ಲಿ ಭೂಕಂಪ ಜರುಗಿದ್ದನ್ನು ಖಚಿತ ಪಡಿಸಿದೆ. ಇಲ್ಲಿ ಒಟ್ಟು 7.4 ರ ಪ್ರಾಥಮಿಕ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಈ ಭೂಕಂಪವು ಭೂಮಿಯ 16.5 ಅಡಿ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ.
ಭೂಕಂಪ ಸಂಭವಿಸುತ್ತಿದ್ದಂತೆ ಭೂಮಿ ಕಂಪಿಸಿದ ಅನುಭವ ಜನರ ಗಮನಕ್ಕೆ ಬಂದಿದೆ. ಈ ಕೂಡಲೇ ಬೃಹತ್ ಕಟ್ಟಡಗಳಲ್ಲಿ, ಕಚೇರಿಗಳಲ್ಲಿ, ಮನೆಗಳಿಂದ ಜನರು ಹೊರ ಓಡಿ ಬಂದಿದ್ದಾರೆ. ಘಟನೆಯಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಇಶಿಕಾವಾ ಪ್ರಿಫೆಕ್ಚರ್ನ ವಾಜಿಮಾ ನಗರದ ಸಮುದ್ರದಲ್ಲಿ ದೈತ್ಯ ಅಲೆಗಳು ಉಂಟಾಗಿವೆ. ಸುಮಾರು 1 ಮೀಟರ್ಗಿಂತಲೂ ಹೆಚ್ಚು ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸಿವೆ ಎಂದು ವರದಿ ತಿಳಿಸಿದೆ.