- +91 73497 60202
- [email protected]
- November 23, 2024 12:31 AM
ಕಸ ಸಂಗ್ರಹಿಸುವ ಬಡ ವೃದ್ಧೆಗೆ ಅಯೋಧ್ಯೆಗೆ ವಿಶೇಷ ಆಹ್ವಾನ..! ಇಲ್ಲಿದೆ ಭಾವನಾತ್ಮಕ ಕಥೆ
ನ್ಯೂಸ್ ನಾಟೌಟ್: ಛತ್ತೀಸ್‌ಗಢದ ರಾಜೀಮ್‌ನಲ್ಲಿ ಕಸ ಸಂಗ್ರಹಿಸುವ ಬಿಹುಲಾ ಬಾಯಿ (Bihula Bai)ಎಂಬವರು ಅಯೋಧ್ಯೆಯ ರಾಮಮಂದಿರದ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರದಮಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಿಹುಲಾ ಬಾಯಿ ಪ್ರತಿದಿನ ಕಸ ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ರಾಮ ಮಂದಿರ (Ram Mandira) ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಾರ್ಯ ನಡೆಯುತ್ತಿದ್ದಾಗ ಇಡೀ ದಿನ ಕಸ ಸಂಗ್ರಹಿಸಿ ಬರುವ 40 ರೂ. ಸಂಪಾದನೆಯಲ್ಲಿ 20 ರೂ. ದೇಣಿಗೆ ನೀಡಿದ್ದರು ಎನ್ನಲಾಗಿದೆ. ಬಿಹುಲಾ ಬಾಯಿಯ ಈ ಭಾವನೆಯನ್ನು ನೋಡಿದ ಹಿಂದೂ ಸಂಘಟನೆಯ ಕೆಲವರು ಬಿಹುಲಾ ಬಾಯಿಯ ಗುಡಿಸಲಿಗೆ ತೆರಳಿ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಸ್ವೀಕರಿಸಿದ ನಂತರ ಬಿಹುಲಾ ಬಾಯಿ ಭಾವುಕರಾಗಿದ್ದು, ಈಗ ಬದುಕಿನಲ್ಲಿ ಸಂತಸದ ಹೊಳೆ ಹರಿದಿದೆ ಎಂದರು. ಅಲ್ಲದೆ ಅವರ ಇಡೀ ಕುಟುಂಬವು ರಾಮನ ದರ್ಶನದ ಬಗ್ಗೆ ತುಂಬಾ ಉತ್ಸುಕವಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಹುಲಾ, ಕಸ ಆರಿಸಿ ಬಂದ ಹಣದಿಂದ 20 ರೂ. ವನ್ನು ಅಯೋಧ್ಯೆಗೆ ದಾನ ಮಾಡಿದ್ದೇನೆ. ಈಗ ನನಗೆ ಅಯೋಧ್ಯೆಯಿಂದ ಆಹ್ವಾನ ಬಂದಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಶ್ರೀರಾಮನ ದರ್ಶನಕ್ಕೆ ಹೋಗುತ್ತೇನೆ. ನನ್ನ ವೃದ್ಧಾಪ್ಯದಲ್ಲಿ ನಾನು ಅಯೋಧ್ಯೆಗೆ (Ayodhya) ಹೋಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ಸಮರ್ಪಣಾ ಅಭಿಯಾನದ ವೇಳೆ ನಾವು ಈ ವೃದ್ಧೆಯನ್ನು ಭೇಟಿಯಾದಾಗ ಅವರು ಮಧ್ಯಾಹ್ನ ಕಸ ಮಾರಾಟ ಮಾಡಿ ಬರುತ್ತಿದ್ದರು. ಆಗ ಅವರು ನಮ್ಮ ಬಳಿ, ಮಗಾ ಇಂದು ಒಂದು ದಿನದಲ್ಲಿ 40 ರೂ. ಮೌಲ್ಯದ ಕಸ ಮಾರಾಟವಾಗಿದೆ ಎಂದಿದ್ದರು. ಅಲ್ಲದೆ ಅವರ ಸಂಪಾದನೆಯ ಅರ್ಧದಷ್ಟು ಅಂದರೆ 20 ರೂ. ಕೊಟ್ಟು ರಸೀದಿ ಪಡೆದುಕೊಂಡರು. ಇದು ತುಂಬಾ ಭಾವನಾತ್ಮಕ ಸಮರ್ಪಣೆಯಾಗಿತ್ತು. ಆದ್ದರಿಂದ ಈಗ ಬಿಹುಲಾ ದೇವರ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದರು.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ