ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ರಾಯಚೂರು ವಿಭಾಗದಲ್ಲಿ ಒಟ್ಟು 133 ಅಪ್ರೆಂಟಿಸ್ ತರಬೇತುದಾರರ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದ್ದು,ಆಸಕ್ತರು ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.ತಾಂತ್ರಿಕ ಶಿಶಿಕ್ಷು ಹುದ್ದೆಗಳನ್ನು ಆಟೋ ಮೆಕ್ಯಾನಿಕ್, ಆಟೋ ವಿದ್ಯುತ್, ಆಟೋ ವೆಲ್ಡರ್, ಆಟೋ ಫೀಟರ್, ಆಟೋ ಪೇಂಟರ್, ಆಟೋ ಮಷಿನಿಸ್ಟ್‌ ವೃತ್ತಿಯಲ್ಲಿ ತರಬೇತಿ ಪಡೆಯಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯಾ ವೃತ್ತಿಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಹೊಂದಿರುವವರು ಆನ್‌ಲೈನ್‌ ಮೂಲಕ ರಿಜಿಸ್ಟರ್ ಮಾಡಿದ ಅರ್ಜಿ ಮತ್ತು ಅಭ್ಯರ್ಥಿಗಳು ಭರ್ತಿ ಮಾಡಿದ ನಿಗದಿತ ಅರ್ಜಿ ಮತ್ತು ಮೂಲ ದಾಖಲಾತಿ ಹಾಗೂ ಒಂದು ಸೆಟ್‌ ಜೆರಾಕ್ಸ್‌ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ನೇರ ಸಂದರ್ಶನ ಸ್ಥಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಭಾಗೀಯ ಕಚೇರಿ, ರಾಯಚೂರು ವಿಭಾಗ, ರಾಯಚೂರು.ನೇರ ಸಂದರ್ಶನ ದಿನಾಂಕ : 11-01-2024 ರ ಬೆಳಿಗ್ಗೆ 10-00 ರಿಂದ.ತರಬೇತಿ ಅವಧಿ : 1 ವರ್ಷ. ವಿದ್ಯಾರ್ಹತೆ : ವೃತ್ತಿಗೆ ಸಂಬಂಧಿಸಿದ ಐಟಿಐ ಟ್ರೇಡ್‌ನಲ್ಲಿ ಪಾಸ್. ಮಾಸಿಕ ಸ್ಟೈಫಂಡ್ : ಶಿಶಿಕ್ಷು ಕಾಯಿದೆ 1961 ರನ್ವಯ ಮೀಸಲಾತಿ : ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 23, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 09 ಹುದ್ದೆಗಳು ಮೀಸಲಿವೆ. ಆನ್‌ಲೈನ್‌ ಅರ್ಜಿಯನ್ನು ವೆಬ್‌ಸೈಟ್‌ ವಿಳಾಸ www.apprenticeshipindia.org ನಲ್ಲಿ ಭರ್ತಿ ಮಾಡಬೇಕು. ಮೈಸೂರು ಸೆಸ್ಕಾಂನಲ್ಲಿ 200 ಹುದ್ದೆ ನೇಮಕ: ಡಿಪ್ಲೊಮ, ಯಾವುದೇ ಪದವೀಧರರು ಅರ್ಜಿ ಹಾಕಿ ತರಬೇತಿ ಪಡೆಯಲು ಬಯಸುವವರು ಆನ್‌ಲೈನ್‌ ನೊಂದಣಿಗೆ ಆಧಾರ್‌ ಕಾರ್ಡ್‌ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ವಿವರಗಳು, ಒಂದಕ್ಕೊಂದು ತಾಳೆಯಾಗುವಂತೆ ನೀಡಬೇಕು. ಇಲ್ಲವಾದಲ್ಲಿ ಅರ್ಜಿಗೆ ಅಡೆಚಣೆ ಉಂಟಾಗಲಿದೆ. ಈಗಾಗಲೇ ಶಿಶಿಕ್ಷು ಕಾಯಿದೆ 1961 ರನ್ವಯ ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಮುಗಿದ ನಂತರ ನಿಗಮದಲ್ಲಿ ಕೆಲಸ ಒದಗಿಸುವ ಬಗ್ಗೆ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ.ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ದೈಹಿಕ ಅರ್ಹತೆ ಪಡೆದಿರಬೇಕು ಮತ್ತು ತರಬೇತಿಗೆ ಹಾಜರಾಗುವ ಮುನ್ನ ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು ಎಂದು ವರದಿ ತಿಳಿಸಿದೆ.