ನ್ಯೂಸ್ ನಾಟೌಟ್: ಬೀದಿ ನಾಯಿಗಳೆಂದ್ರೆ ಸಾಕು ಮಾರು ದೂರ ಹೋಗುವವರೇ ಹೆಚ್ಚು.ಅದಕ್ಕೆ ಪ್ರೀತಿ ಆರೈಕೆ ಅಂದ್ರೆ ಕನಸಿನ ಮಾತು.ಆದ್ರೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ.ಅವರ ಶ್ವಾನ ಪ್ರೇಮ ನೋಡಿದ್ರೆ ಎಂತಹವರೂ ಅಚ್ಚರಿ ಪಡ್ತಾರೆ.
ಇವರ ಹೆಸರು ಕಾಲ್ಸಂಗ್ ಡೋರ್ಜಿ ಇವರಿಗೆ ಅದೆಂತಹ ನಾಯಿ ಪ್ರೇಮ ಅಂದ್ರೆ ಆ ನಾಯಿ ಅದೆಂತಹದ್ದೇ ಅಸಹ್ಯ ಪರಿಸ್ಥಿತಿಯಲ್ಲಿರಲಿ.ತನ್ನ ಮಗುವಿನಂತೆ ಕಾಪಾಡುತ್ತಾರೆ.ಮೈಸೂರು ಕೊಡಗು ಗಡಿಯಲ್ಲಿರೋ ಬೈಲುಕೊಪ್ಪ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕಾಲ್ಸಂಗ್ ಡೋರ್ಜಿ ಅನಾಥ ಬೀದಿ ನಾಯಿಮರಿಗಳ ಆಶ್ರಯ ಕೇಂದ್ರವನ್ನೇ ಸ್ಥಾಪಿಸಿದ್ದಾರೆ ಅನ್ನೋದು ಬಹಳ ಆಶ್ಚರ್ಯ ಪಡೋ ವಿಚಾರ.
ಇವರ ಬಳಿಯಲ್ಲಿ ಒಟ್ಟು 40ಕ್ಕೂ ಅಧಿಕ ನಾಯಿಗಳಿವೆ. ಎಲ್ಲವೂ ಬೀದಿನಾಯಿಗಳೇ ಅನ್ನೋದು ಅಚ್ಚರಿ ಪಡೋ ವಿಚಾರ. ಬಹಳಷ್ಟು ನಾಯಿಗಳು ಅನಾಥವಾಗಿ ವಿವಿಧ ತೊಂದರೆಗೆ ಸಿಲುಕಿಕೊಂಡಿವೆ. ಕೊಪ್ಪ, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಹೀಗೆ ವಿವಿಧ ಸ್ಥಳಗಳಿಂದ ಈ ನಾಯಿಗಳನ್ನು ರಕ್ಷಿಸಿ ತಂದು ತಮ್ಮ ಆಶ್ರಯತಾಣದಲ್ಲಿ ಸಾಕುತ್ತಿದ್ದಾರೆ.
ಬರೇ ಆಹಾರ ಆಶ್ರಯ ಮಾತ್ರವಲ್ಲ ಅನಾರೋಗ್ಯಪೀಡಿತ ನಾಯಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಇವರೇ ನೀಡ್ತಾರೆ.ಇವರ ಬಳಿಕ 40ಕ್ಕೂ ಅಧಿಕ ನಾಯಿಗಳಿವೆ. ನಾಯಿ ಬೇಕೆಂದನಿಸಿದವರಿಗೂ ಇವರು ಕೊಡೋದಕ್ಕೂ ಸಿದ್ಧರಾಗುತ್ತಾರೆ.ಇವರ ಬಳಿ ಬಹುತೇಕ ನಾಯಿಗಳು ಅನಾರೋಗ್ಯಪೀಡಿತವಾಗಿಯೇ ಬರುತ್ತವೆ. ಆದ್ರೆ ಒಮ್ಮೆ ಇವರ ಬಳಿ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಸುಧಾರಿಸುತ್ತಾರೆ. ದಿನಕ್ಕೆ ಮೂರು ಹೊತ್ತು ಅತ್ಯುತ್ತಮ ದರ್ಜೆಯ ಆಹಾರವನ್ನೇ ನೀಡುತ್ತಾರೆ.ಇವರನ್ನು ಕಂಡ್ರೆ ನಾಯಿಗಳಿಗೂ ಅಂತ್ಯಂತ ಪ್ರೀತಿ.
ಬೇಸರದ ಸಂಗತಿ ಅಂದ್ರೆ ಇವರ ನಾಯಿ ಪ್ರೀತಿ ನೋಡಲಾಗದೆ ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರಂತೆ. ಇವರ ನಾಯಿ ಪ್ರೀತಿ ನೋಡಿದ ಸ್ಥಳೀಯರು ತಾವೂ ಕೈಲಾದ ಸಹಾಯ ಮಾಡುತ್ತಾರೆ. ತಿಂಗಳಿಗೆ ಇವರಿಗೆ ಈ ನಾಯಿಗಳ ಪಾಲನೆ ಪೋಷಣೆ, ಕಟ್ಟಡ ಬಾಡಿಗೆ ಸೇರಿ 70 ಸಾವಿರ ರೂ.ಖರ್ಚಾಗುತ್ತದೆ. ಇವರ ಅಕ್ಕ ಡೋಲ್ಮಾ ಈ ನಾಯಿಗಳು ಆರೈಕೆಗೆ ಪ್ರತಿ ತಿಂಗಳು ಸಾಕಷ್ಟು ಹಣ ಕಳುಹಿಸುತ್ತಾರೆ. ಹಾಗಾಗಿ ನಾಯಿ ಆರೈಕೆ ಕೇಂದ್ರಕ್ಕೆ ಡೋಲ್ಮಾ ಅಂತಾನೇ ಹೆಸರಿಟ್ಟಿದ್ದಾರೆ.