ನ್ಯೂಸ್ ನಾಟೌಟ್ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಜಾನಪದ ಪರಿಷತ್ತು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಜಯರಾಮ ಶೆಟ್ಟಿ ಕೆ. ಎನ್. ಆಯ್ಕೆಯಾಗಿದ್ದಾರೆ.
ಜಯರಾಮ ಶೆಟ್ಟಿ ದುಗ್ಗಲಡ್ಕದ ಮಿತ್ರ ಯುವಕ ಮಂಡಳಿ ಕೊಯಿಕುಳಿ ಇದರ ಅಧ್ಯಕ್ಷರಾಗಿಯೂ, ಕಾರ್ಯಕ್ರಮ ಸಂಘಟಕರಾಗಿಯೂ ಕಾರ್ಯ ನಿರ್ವಹಿಸಿರುವ ಹೆಗ್ಗಳಿಕೆ ಇವರದ್ದು. ಸುಳ್ಯದಲ್ಲಿ ಯಶಸ್ವಿ ಉದ್ಯಮಿಯಾಗಿರುವ ಇವರು ತಮ್ಮ ವ್ಯಾಪ್ತಿಯಲ್ಲಿ ಜಾನಪದ, ಸಂಸ್ಕೃತಿ, ಕಲೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಜಿಲ್ಲಾ ಘಟಕದಿಂದ ನಡೆಯುವ ಕಾರ್ಯಕ್ರಮಗಳಿಗೂ ಸಹಕರಿಸುವುದು ತಾಲೂಕು ಘಟಕದ ಕಾರ್ಯವಾಗಿದ್ದು,ಜಾನಪದ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಇರಾದೆ ಇವರಲ್ಲಿದೆ.
ಜಾನಪದ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ಮುಖ್ಯ. ಜಾನಪದ ಕಲಾವಿದರು ವಂಶಪಾರಂಪರ್ಯವಾಗಿ ತಮ್ಮ ಆತ್ಮಸಂತೃಪ್ತಿಗಾಗಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅದರಲ್ಲೂ ಗ್ರಾಮೀಣ ಕಲಾವಿದರು ಇಂದಿಗೂ ವಿಭಿನ್ನವಾದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.ಈ ಮೂಲಕ ಕಲೆ, ಕಲಾವಿದರ ಮೇಲೆ ಬೆಳಕು ಚೆಲ್ಲುವಂತಹ ಕೆಲಸವನ್ನು ಜಯರಾಮ ಶೆಟ್ಟಿ ಕೆ. ಎನ್. ಮಾಡುತ್ತಿದ್ದು,ಹೆಮ್ಮೆಯ ಸಂಗತಿ.