ನ್ಯೂಸ್ ನಾಟೌಟ್: ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ.ಕೊಟ್ಯಂತರ ರಾಮ ಭಕ್ತರ ಕನಸು ಈಡೇರಿದೆ.ಇದಕ್ಕಾಗಿ ಸಕಲ ಸಿದ್ಧತೆಗಳು ನಡಿತಿದ್ದು,ಆ ಒಂದು ಅದ್ಭುತ ಕ್ಷಣಕ್ಕಾಗಿ ಎಲ್ಲರೂ ಕಾತುರರಾಗಿದ್ದಾರೆ.ಇದರ ಮಧ್ಯೆ ಈ ಕಾರ್ಯಕ್ರಮಕ್ಕೆ ಲೇವಡಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.ಆಹ್ವಾನವಿದ್ದರೂ ನಾವು ಬರಲ್ಲ ಅನ್ನುತ್ತಿರುವ ಒಂದು ವರ್ಗವಾದ್ರೆ ಇದು ಚುನಾವಣೆ ಗಿಮಿಕ್ ಎನ್ನುತ್ತಿದೆ ಇನ್ನೊಂದು ವರ್ಗ. ಅದರ ಮಧ್ಯೆ ವೇದಿಕೆ ಮೇಲೆ ನಿಂತು ರಾಮಮಂದಿರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವವರ ಸಂಖ್ಯೆಯೂ ಹುಟ್ಟಿಕೊಂಡಿದೆ.ಆದರೆ ಇಲ್ಲೊಬ್ಬ ವ್ಯಕ್ತಿ ರಾಮಮಂದಿರ ಬಗ್ಗೆ ಗೇಲಿ ಮಾಡುತ್ತಿದ್ದ ವೇಳೆಯೇ ವೇದಿಕೆ ದಡಾರ್ ಎಂದು ಕುಸಿದು ಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ.
ಹೌದು, ಬಿಹಾರದಲ್ಲಿ ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಸಭೆಯೊಂದರಲ್ಲಿ ರಾಮ ಮಂದಿರದ ಬಗ್ಗೆ ಪ್ರಶ್ನೆ ಮಾಡುತ್ತಾ, ಇಡೀ ಸಮಾರಂಭದ ಬಗ್ಗೆ ಲೇವಡಿ ಮಾಡುತ್ತಿದ್ದರು. ರಾಮ ಮಂದಿರದ ರಚನೆಯ ಬಗ್ಗೆ, ರಾಮನ ಬಗ್ಗೆ ಈತ ಪ್ರಶ್ನೆ ಮಾಡುತ್ತಿರುವಾಗಲೇ, ಈತ ಮಾತನಾಡುತ್ತಿದ್ದ ಇಡೀ ವೇದಿಕೆಯೇ ಕಾಕತಾಳೀಯ ಎನ್ನುವಂತೆ ಕುಸಿದು ಬಿದ್ದಿದೆ. ಪಸ್ಮಾಂಡ ವಂಚಿತ್ ಮಹಾಸಂಘಟನ್ ಜನವರಿ 18 ರಂದು ಗಯಾದ ಅಟಾರಿ ಬ್ಲಾಕ್ನ ದಿಹುರಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51 ನೇ ವಾರ್ಷಿಕೋತ್ಸವದ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಪಸ್ಮಾಂಡ ವಂಚಿತ್ ಮಹಾಸಂಘಟನ್ನ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಸಂಸದ ಅಲಿ ಅನ್ವರ್ ಅನ್ಸಾರಿ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಜನರನ್ನು ಉದ್ದೇಶಿಸಿ ಅಲಿ ಅನ್ವರ್ ಅನ್ಸಾರಿ ಮಾತನಾಡುತ್ತಿದ್ದರು. ಭಗವಾನ್ ಶ್ರೀರಾಮನ ಕಾರ್ಯಕ್ರಮಗಳು ಹಾಗೂ ಕೇಂದ್ರ ಸರ್ಕಾರವನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವಿಚಾರವಾಗಿ ಮಾತನಾಡುವ ವೇಳೆಗಾಗಲೇ ಇಡೀ ವೇದಿಕೆ ಎಲೆಗಳ ರೀತಿ ಉದುರಿಬಿದ್ದಿದೆ. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಎಲ್ಲರೂ ನೆಲಕ್ಕೆ ಬಿದ್ದಿದ್ದಾರೆ. ವೇದಿಕೆಯಿಂದ ಬೀಳುವ ಮುನ್ನವೇ ಮಾಜಿ ಸಂಸದ ಹಾಗೂ ಪಸ್ಮಾಂಡ ವಂಚಿತ್ ಮಹಾಸಂಘಟನ್ನ ರಾಷ್ಟ್ರೀಯ ಅಧ್ಯಕ್ಷ ಅಲಿ ಅನ್ವರ್ ಅನ್ಸಾರಿ ಅವರ ಕಾಲಿಗೆ ಗಾಯವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಜೆಪಿಯ ಮುಂದಿನ ಚುನಾವಣೆ ವೇಳೆ ಪಾಸ್ಮಾಂಡ ಮುಸ್ಲಿಂ ಸಮುದಾಯದ ಮೇಲೆ ಹೆಚ್ಚಿನ ಗಮನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಸ್ಮಾಂಡ ಮತಬ್ಯಾಂಕ್ಅನ್ನು ಗಟ್ಟಿ ಮಾಡಿಕೊಳ್ಳುವ ಮೂಲಕ ಮುಸ್ಲಿಂಮರ ವೋಟ್ ಪಡೆಯಲು ನಿರ್ಧಾರ ಮಾಡಿದ್ದಾರೆ. ಪಸ್ಮಾಂಡ ಮುಸ್ಲಿಂ ಸಮಾಜದ ಹಿಂದುಳಿದ ವರ್ಗ . ಈ ವರ್ಗವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ. 2022ರಲ್ಲಿಯೇ ಪಸ್ಮಾಂಡ ಮುಸ್ಲಿಂ ಮೋರ್ಚಾದ ರೂಪದಲ್ಲಿ ಪಕ್ಷವು ಪ್ರತ್ಯೇಕ ವಿಭಾಗವನ್ನು ರಚಿಸಿದೆ ಎಂದು ಹೇಳಲಾಗಿದೆ.