ನ್ಯೂಸ್ ನಾಟೌಟ್: 103 ವರ್ಷದ ವ್ಯಕ್ತಿ 49 ವರ್ಷದ ಮಹಿಳೆಯನ್ನು ಮದುವೆಯಾಗಿರುವ ಘಟನೆ ಭೋಪಾಲ್ನಲ್ಲಿ ನಡೆದಿದ್ದು, ಇವರಿಬ್ಬರು 2023ರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
103 ವರ್ಷದ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೋಪಾಲ್ನ ಇಟ್ವಾರದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಬೀಬ್ ನಜರ್, ಕಳೆದ ವರ್ಷ 49 ವರ್ಷದ ಫಿರೋಜ್ ಜಹಾನ್ ಅವರೊಂದಿಗೆ ವಿವಾಹವಾಗಿದ್ದಾರೆ.
ಸಾಕಷ್ಟು ಮಂದಿ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಶುಭ ಹಾರೈಕೆಯ ಸುರಿಮಳೆಯ ನಡುವೆಯೇ ಅವರು ವಧುವಿನೊಂದಿಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದು ನಾಜರ್ ನ ಮೂರನೇ ಮದುವೆಯಾಗಿದ್ದು, ಅವರ ಎರಡನೇ ಹೆಂಡತಿಯ ಕಾಲವಾದ ನಂತರ, ನಾಜರ್ ಒಂಟಿತನವನ್ನು ಅನುಭವಿಸಿದರು, ಇದೇ ಕಾರಣಕ್ಕೆ ಮತ್ತೊಂದು ಮದುವೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅವರ ಪತ್ನಿಯಾಗಿ ಬಂದಿರುವ ಫಿರೋಜ್ ಜಹಾನ್ ಕೂಡ ತನ್ನ ಪತಿಯನ್ನು ಕಳೆದುಕೊಂಡಿದ್ದರು. ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿಕೊಳ್ಳಲು ಯಾರಾದರೂ ಬೇಕೇ ಬೇಕು ಎಂಬುದನ್ನು ಅರಿತು ಅನುಕಂಪದಿಂದ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.