ನ್ಯೂಸ್ ನಾಟೌಟ್: ನ್ಯೂಜಿಲೆಂಡ್ನ ಸಂಸತ್ ಸದಸ್ಯರೊಬ್ಬರು ಮಾಡಿದ ಅಬ್ಬರದ ಭಾಷಣ ಮತ್ತು ಆ ಆಚರಣೆಯ ವಿಧ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಇದು ಭಾಷಣದ ರೀತಿ ಅನಿಸದಿದ್ದರೂ ಇದು ಮಾವೋರಿ ಸಮುದಾಯದ ಮಾತೃ ಭಾಷೆ ಎನ್ನಲಾಗಿದೆ. ಇದೀಗ ಈ ಭಾಷಣದ ತುಣುಕು ಎಲ್ಲ ಕಡೆ ವೈರಲ್ ಆಗುತ್ತಿದೆ.
21 ವರ್ಷ ವಯಸ್ಸಿನ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಎಂಬವರ ಈ ಭಾಷಣ ವಿಚಿತ್ರವಾಗಿ ಕಾಣುತ್ತಿದ್ದು. ಈಕೆ ನ್ಯೂಜಿಲೆಂಡ್ ದೇಶದ ಅತ್ಯಂತ ಕಿರಿಯ ಸಂಸದೆ ಎನ್ನಲಾಗಿದೆ.
ನ್ಯೂಜಿಲೆಂಡ್ನ ಸ್ಥಳೀಯ ಜನರ ಸಮಸ್ಯೆಗಳು ಹಾಗೂ ಮಾವೋರಿ ಸಮುದಾಯದ ಪರವಾಗಿ ಭಾಷಣ ಮಾಡಿದ್ದಾರೆ. ತನ್ನ ಮತದಾರರಿಗೆ ಒಂದು ಭರವಸೆಯನ್ನುನೀಡಿದ್ದೇನೆ, “ನಾನು ನಿಮಗಾಗಿ ಸಾಯುತ್ತೇನೆ … ಆದರೆ ನಾನು ನಿನಗಾಗಿ ಬದುಕಿದ್ದೇನೆ ಎಂದು ಈ ಭಾಷಣದಲ್ಲಿ ಹೇಳಿದ್ದಾರೆ. ಮಾವೋರಿ ಜನರ ನನ್ನನ್ನೂ ಇಲ್ಲಿಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರಿಗಾಗಿ ನಾನು ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಈ ಭಾಷಣವನ್ನು ನಮ್ಮ ಹಿರಿಯರಿಗೆ ಹಾಗೂ ಮುಂದಿನ ಪೀಳಿಗೆಯ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ನ್ಯೂಜಿಲೆಂಡ್ ಸಂಸತ್ತಿಗೆ ಆಯ್ಕೆಯಾದರು. 2008ರಿಂದ ಸತತವಾಗಿ ಆಯ್ಕೆಯಾಗಿದ್ದ ನಾನಿಯಾ ಮಹುತಾ ಎಂಬವರನ್ನು ಸೋಲಿಸಿ ಸಂಸದರಾಗಿದ್ದಾರೆ ಎನ್ನಲಾಗಿದೆ.