ನ್ಯೂಸ್ ನಾಟೌಟ್ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನ ವಿಶೇಷ ರೀತಿಯಲ್ಲಿ ಅಲಂಕಾರಗೊಂಡಿದೆ.ಸಾವಿರಾರು ಭಕ್ತರ ಗಮನವನ್ನು ತನ್ನತ್ತ ಆಕರ್ಷಿಸುತ್ತಿರುವ ಈ ಕ್ಷೇತ್ರದಲ್ಲಿ ವಿಜೃಂಭಣೆಯ ವಾರ್ಷಿಕ ಜಾತ್ರೆ ಹಾಗೂ 100 ವರ್ಷಗಳ ಬಳಿಕ ಬ್ರಹ್ಮರಥೋತ್ಸವವು ಇಂದಿನಿಂದ ಜ.21 ರ ತನಕ ಅದ್ದೂರಿಯಾಗಿ ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.ಜ.15 ರಂದು ಶ್ರೀ ಗಣಪತಿ ದೇವರಿಗೆ ಮೂಡಪ್ಪ ಸೇವೆ,ಶ್ರೀ ದೇವಿಗೆ ದೊಡ್ಡ ರಂಗಪೂಜೆ,ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ರಥ ಶುದ್ಧಿ ,ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾಬಲಿ, ಶ್ರೀ ಗಣಪತಿ ದೇವರಿಗೆ ಮೂಡಪ್ಪ ಸೇವೆ, ಶ್ರೀ ದೇವಿಗೆ ದೊಡ್ಡ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಬೆಳಗ್ಗೆ ಗಂಟೆ 7 ಕ್ಕೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ದಿ ಕಲಶ,ಪೂರ್ವಾಹ್ನ ಗಂಟೆ 9.45 ರಿಂದ 10.10 ರ ಕುಂಭಲಗ್ನದ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆ ಮತ್ತು ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ.ಬೆಳಗ್ಗೆ ಗಂಟೆ 10 ಕ್ಕೆ ಜಾತ್ರೆಯ ಉಗ್ರಾಣ ಮುಹೂರ್ತ,ಮಹಾಪೂಜೆ, ಪ್ರಸಾದ , ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3 ಗಂಟೆಗೆ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ, ರಾತ್ರಿ 7 ಕ್ಕೆ ದೇವತಾ ಪ್ರಾರ್ಥನೆ, ಧ್ವಜಾರೋಹಣ ನಡೆಯಲಿದೆ.ನಂತರ ದೇವರ ಬಲಿ ಹೊರಟು ಉತ್ಸವ,ವಸಂತ ಕಟ್ಟೆ ಪೂಜೆ,ಮಹಾಪೂಜೆ, ಶ್ರೀ ಭೂತ ಬಲಿ ನಡೆಯಲಿದೆ.
ಬೆಳಗ್ಗೆ ಗಂಟೆ 8.30 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮದ್ಯಾಹ್ನ 12 ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಪೇಟೆ ಸವಾರಿ, ಮಹಾಪೂಜೆ, ಶ್ರೀ ಭೂತ ಬಲಿ ನಡೆಯಲಿದೆ.
ಬೆಳಗ್ಗೆ 8.30 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ,ಶ್ರೀ ಉಳ್ಳಾಕುಲು ದೈವದ ಭಂಡಾರ ಬರುವುದು,ದರ್ಶನ ಬಲಿ,ಬಟ್ಟಲು ಕಾಣಿಕೆ, ಪ್ರಸಾದ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 7 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ,ದೀಪೋತ್ಸವ,ಪಲ್ಲಕ್ಕಿ ಉತ್ಸವ,ವಸಂತ ಕಟ್ಟೆ ಪೂಜೆ,ನೃತ್ಯ ಬಲಿ,ಮಹಾಪೂಜೆ,ಶ್ರೀ ಭೂತಬಲಿ ನಡೆಯಲಿದೆ.
ಬೆಳಗ್ಗೆ 8.30 ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ 12 ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 7ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಡೆ ಪೂಜೆ,ವ್ಯಾಘ್ರಚಾಮುಂಡಿ ದೈವ(ಪಿಲಿಭೂತ) ದ ಭಂಡಾರ ಬರುವುದು. ಅನಂತರ ಬ್ರಹ್ಮರಥೋತ್ಸವ,ಪೆರುವಾಜೆ ಬೆಡಿ ಪ್ರದರ್ಶನ ನಡೆಯಲಿದೆ. ಆ ಬಳಿಕ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.
ಬೆಳಗ್ಗೆ 7 ಕ್ಕೆ ಕವಾಟೋದ್ಘಾಟನೆ,ಶ್ರ್ರೀ ದೇವರಿಗೆ ತೈಲಾಭಿಷೇಕ,ಪಂಚಾಮೃತಾಭಿಷೇಕ,ಸೀಯಾಳಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ತುಲಾಭಾರ ಸೇವೆ,ಯಾತ್ರಾ ಹೋಮ,ಪ್ತಸಾದ ವಿತರಣೆ ನಡೆಯಲಿದೆ.ರಾತ್ರಿ 7 ಕ್ಕೆ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ,ಅವಭೃತ, ಧ್ವಜಾವರೋಹಣ,ಮಹಾಪೂಜೆ,ಪ್ರಸಾದ ವಿತರಣೆ ನಂತರ ಉಳ್ಳಾಕುಲು,ಮೈಷಂತಾಯ,ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರ ತೆಗೆಯುವುದು.
ಬೆಳಿಗ್ಗೆ ಮಹಾಗಣಪತಿ ಹೋಮ,ಕಲಶ ಪೂಜೆ, ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮೋತ್ಸವ,ಪ್ರಸಾದ ವಿತರಣೆ ನಡೆಯಲಿರುವುದು. ಮದ್ಯಾಹ್ನ ಶ್ರೀ ದೇವರಿಗೆ ಸಂಪ್ರೋಕ್ಷಣೆ , ಕಲಶಾಭಿಷೇಕ, ಮಹಾಪೂಜೆ,ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿರುವುದು. ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ,ಪ್ರಸಾದ ವಿತರಣೆ,ಅನ್ನಸಂತರ್ಪಣೆ, ಸಂಜೆ 7 ಕ್ಕೆ ಶ್ರೀ ಕಲ್ಲುರ್ಟಿ,ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ. ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.