ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ನಡೆದು ಇತಿಹಾಸದ ಪುಟ ಸೇರಿ ಆಗಿದೆ. ಇಡೀ ದೇಶವೇ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದೆ. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದಲ್ಲೂ ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಯ ದಿನವನ್ನು ಸೋಮವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಗೂನಡ್ಕದ ಪೆಲ್ತಡ್ಕದಿಂದ ಕೆ.ಪಿ ಜಗದೀಶ್ ನೇತೃತ್ವದಲ್ಲಿ ಬೀದಿ ಭಜನೆ, ಮೆರವಣಿಗೆ ನಡೆಯಿತು. ಸುಮಾರು ಮುನ್ನೂರಕ್ಕೂ ಹೆಚ್ಚು ರಾಮ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೆಲ್ತಡ್ಕ, ಪೇರಡ್ಕ, ಗೂನಡ್ಕ, ದರ್ಖಾಸ್, ಬೈಲೆ, ದೊಡ್ಡಡ್ಕ, ಪೆರಂಗೋಡಿ ಹಾಗೂ ಕಡಪಾಲ ಭಾಗದ ರಾಮಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಯೋಧ್ಯೆ ಕರಸೇವಕರಾದ ಸಂಪಾಜೆ ಗ್ರಾಮದ ಎಸ್ ಪಿ ಲೋಕನಾಥ್, ಜಯರಾಮ ಕೊಚ್ಚಿ, ವೆಂಕಪ್ಪ ಪೆರಂಗೋಡಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಪುಟಾಣಿಗಳು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.