ನ್ಯೂಸ್ ನಾಟೌಟ್ : ಅಯೋಧ್ಯೆ ಈಗ ವಿವಿಧ ಅಲಂಕಾರಗಳಿಂದ ರಾರಾಜಿಸುತ್ತಿದೆ. ಫ್ಲೆಕ್ಸ್,ಬಂಟಿಂಗ್ಸ್,ಕಟೌಟ್ಸ್ ಗಳಿಂದ ನಳನಳಿಸುತ್ತಿದೆ.ಒಟ್ಟಿನಲ್ಲಿ ಜನವರಿ 22ರಂದು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ..
ಈಗಾಗ್ಲೇ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಬಂದಿದೆ. ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಯುಷ್ಮಾನ್ ಖುರಾನಾ, ಆಲಿಯಾ ಭಟ್, ಕಂಗನಾ ರನೌತ್ ಈ ಶುಭ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೂ ಆಹ್ವಾನ ಬಂದಿದೆ. ಆದರೆ ಇದೀಗ ಚರ್ಚೆಯಾಗುತ್ತಿರುವ ವಿಷಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಅಯೋಧ್ಯೆ ನಗರದೊಂದಿಗಿನ ನಂಟಿನ ಬಗ್ಗೆ..!
ಅನುಷ್ಕಾ ಶರ್ಮಾ ತಂದೆ ಅಜಯ್ ಕುಮಾರ್ ಶರ್ಮಾ ಮಾಜಿ ಸೇನಾಧಿಕಾರಿ. ಅವರು ದೇಶದ ವಿವಿಧ ಸೇನಾ ಕೇಂದ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅವರು ಅಯೋಧ್ಯೆಯಲ್ಲಿ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೇ 1, 1988 ರಂದು ಜನಿಸಿದರು. ಹೀಗಾಗಿ ಆಕೆಯ ಕುಟುಂಬಕ್ಕೂ ಮತ್ತು ಅಯೋಧ್ಯೆಗೂ ನಿಕಟ ಸಂಪರ್ಕವಿದೆ.. ಜೊತೆಗೆ ನಟಿ ಅನುಷ್ಕಾಗೆ ಧಾರ್ಮಿಕ ವಿಷಯಗಳಲ್ಲಿ ತುಂಬಾ ಆಸಕ್ತಿ.. ಅವರು ಆಗಾಗ್ಗೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ..
ರಾಮಮಂದಿರಕ್ಕೆ ಆಹ್ವಾನ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಿಗೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಆಮಂತ್ರಣ ಪತ್ರಿಕೆಯನ್ನು ನೀಡಿ ಶುಭಸಮಾರಂಭಕ್ಕೆ ಆಹ್ವಾನಿಸಿದ್ದಾರೆ..