‘ಡ್ರೋನ್’ ಪ್ರತಾಪ್ ವಿರುದ್ಧ ಮತ್ತೊಂದು ವಂಚನೆ ಕೇಸ್..! ಉದ್ಯಮಿ ಕೈಯಿಂದ 80 ಲಕ್ಷ ರೂ ಪಡೆದಿದ್ನಾ ಪ್ರತಾಪ್..?

ನ್ಯೂಸ್‌ ನಾಟೌಟ್‌ : ‘ಬಿಗ್ ಬಾಸ್ ಕನ್ನಡ ಸೀಸನ್ 10’ ರ ಸ್ಪರ್ಧಿ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ವಂಚನೆ ಕೇಸ್ ಕೇಳಿ ಬಂದಿದೆ. 8 ಡ್ರೋನ್ ಕೊಡೋದಾಗಿ ಪ್ರತಾಪ್ 2 ಡ್ರೋನ್ ನೀಡಿದ್ದಾರೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ ಮೂಲದ ಸಾರಂಗ್ ಮಾನೆ ಎಂಬ ಉದ್ಯಮಿ ಈ ಆರೋಪವನ್ನು ಮಾಡಿದ್ದು, ಪ್ರತಾಪ್ ಒಟ್ಟು 80 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಎಂದು ದೂರಲಾಗಿದೆ. ಇದರ ಜೊತೆಗೆ ಸಾರಂಗ್ ನೀಡಿರುವ ಡ್ರೋನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಾರಂಗ್ “8 ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಎಕ್ಸಿಬಿಶನ್ ವೇಳೆ ಪ್ರತಾಪ್, ನನ್ನ ಪರಿಚಯ ಆಗಿದೆ. ಕೃಷಿ ಜಮೀನಿಗೆ ಔಷಧಿ ಸಿಂಪಡಿಸುವ ಸಲುವಾಗಿ ಡ್ರೋನ್ ಬೇಕು ಅಂತ ಹೇಳಿದ್ದೆ. ಡ್ರೋನ್ ಕೊಡುವ ಟೆಂಡರ್ ಪ್ರಕ್ರಿಯೆಯಲ್ಲಿ ನಮ್ಮಿಬ್ಬರ ನಡುವೆ ಒಪ್ಪಂದ ಆಗಿದೆ. ನಾನು ಪ್ರತಾಪ್‌ಗೆ 38 ಲಕ್ಷ ರೂಪಾಯಿ ಹಣ ಕಳಿಸಿದ್ದರ ಬಗ್ಗೆ ದಾಖಲೆ ಇದೆ. ಪ್ರತಾಪ್ ಡ್ರೋನ್ ಕೊಡ್ತೀನಿ ಅಂತ ಹೇಳಿ 1 ವರ್ಷ ಸತಾಯಿಸಿದ್ದಾರೆ. ಆ ನಂತರದಲ್ಲಿ ಹಣ ವಾಪಸ್ಸು ಮಾಡ್ತೀನಿ ಅಂತ ಕೂಡ ಹೇಳಿದ್ದರು. ಆದರೆ ಇನ್ನೂ ಮಾಡಿಲ್ಲ” ಎಂದು ಆರೋಪ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಕಂಪೆನಿಯ ಡೈರೆಕ್ಟರ್ ಆಗಿರುವ ಮಾಧವ್ ಕಿರಣ್ ಹೇಳುವ ಪ್ರಕಾರ, “ಸಾರಂಗ್ ಮತ್ತು ಪ್ರತಾಪ್, ನಾವು ಕೃಷಿ ಉಡಾನ್ ಪ್ರಯುಕ್ತ ಒಪ್ಪಂದ ಮಾಡಿಕೊಂಡಿದ್ದೆವು. ನಾವು ಎಕ್ಸ್‌ಕ್ಸೂಸಿವ್ ಆಗಿ ಡ್ರೋನ್ ಮಾಡಲು ನಮಗೆ ಲೈಸನ್ಸ್ ಬಂದಿಲ್ಲ. ಪ್ರತಾಪ್ ಗೆ ಡ್ರೋನ್ ವಿಚಾರಕ್ಕೆ ಸುಮಾರು ಬೇಡಿಕೆ ಬಂತು. ಹೀಗಾಗಿ ಕೆಲವು ಪಾರ್ಟ್‌ಗಳನ್ನು ನಾವು ಕಬ್ಬಿಗೆ ಒಂದಷ್ಟು ಸಿಂಪಡಣೆ ಮಾಡಿಕೊಟ್ಟಿದ್ದೆವು. ಸಾರಂಗ್ ಜೊತೆಗೆ ನಾವು ಚೆನ್ನಾಗಿದ್ದೆವು, ಸಾರಂಗ್ ನಮಗೆ ಹಣ ಕೊಡೋದು ಕೂಡ ತಡಮಾಡಿದರು. ಸಾರಂಗ್ ಗೆ ಪ್ರತಾಪ್ 60-65 ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳೋದೆಲ್ಲ ಸುಳ್ಳು” ಎಂದು ಹೇಳಿದ್ದಾರೆ.