ನ್ಯೂಸ್ ನಾಟೌಟ್: ಕಳೆದ ಮೂರು ದಿನಗಳಿಂದ ಸುಳ್ಯ ಭಾಗದಲ್ಲಿ ಮಳೆ ಸುರಿಯುತ್ತಿದೆ.ಜನವರಿ ೪ರಂದು ಸಾಧಾರಣ ಮಳೆಯಾಗಿತ್ತು.ಬಳಿಕ ಜನವರಿ 6 ರಂದು ಬರೋಬ್ಬರಿ 2 ಗಂಟೆಗಳ ಕಾಲ ಜಡಿ ಮಳೆ ಸುರಿದಿತ್ತು.
ಅರಬ್ಬಿ ಸಮುದ್ರದಲ್ಲಿ ಹವಾಮಾನ ವ್ಯತ್ಯಯದಿಂದಾಗಿ ಸೈಕ್ಲೋನ್ ಸೃಷ್ಟಿಯಾಗಿದ್ದು,ಈ ಹಿನ್ನೆಲೆಯಲ್ಲಿ ಮಳೆ ಸುರಿಯುತ್ತಿದೆ.ಜನವರಿ ೩ರಂದೇ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ತುಂತುರು ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ನೀಡಿತ್ತು.ಇದೀಗ ಮೋಡ ಕವಿದ ವಾತಾವರಣವಿದ್ದು,ಇನ್ನೆರಡು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.