ನ್ಯೂಸ್ ನಾಟೌಟ್ : ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿರುವ ಬಗ್ಗೆ ಆಗಾಗ್ಗೆ ವರದಿಯಾಗುತ್ತಲೇ ಇದೆ.ಆದರೆ ಅಲ್ಲಿ ಕೆಲಸ ಕೊಡಿ ಅಂತ ಕೆಲಸ ಕೊಡುವಾಗ ಭಾರಿ ಎಚ್ಚರಿಕೆಯಿಂದಲೂ ಇರಬೇಕಾಗುತ್ತದೆ. ಅರೆ! ಕಳ್ಳರಿಗೂ , ಉದ್ಯೋಗಕ್ಕೂ ಏನ್ರಿ ಸಂಬಂಧ ಅಂತ ನೀವು ಯೋಚಿಸುತ್ತಿರಬಹುದು. ಹೌದು,ಕೆಲಸಕ್ಕೆ ಸೇರಿದ ಮರುದಿನದಿಂದಲೇ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ನಗರದಲ್ಲಿ ಮನೆ ಕೆಲಸದವರ ಸೋಗಿನಲ್ಲಿ ಚಿನ್ನಾಭರಣ ಕಳವು ಮಾಡಿದ ಚಾಲಾಕಿ ಮಹಿಳೆಯರನ್ನ ಪೊಲೀಸರು ಇದೀಗ ಬಂಧಿಸಿದ್ದಾರೆ. ವನಿತಾ (38) ಹಾಗೂ ಯಶೋಧ(40) ಬಂಧಿತ ಮಹಿಳೆರು. ಇವರು ಮುಂಬೈಯಿಂದ ಬೆಂಗಳೂರಿಗೆ ಬಂದು ಚಿನ್ನಾಭರಣ ಕಳವು ಮಾಡುತ್ತಿದ್ದರು.
ದೊಡ್ಡಕನ್ನಹಳ್ಳಿಯ SJR ಪ್ಲಾಜಾ ಸಿಟಿಯ ಅಪಾರ್ಟ್ಮೆಂಟ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಶೇಖರ್ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣ ದೋಚಿದ್ದಾರೆ. ಕೆಲಸಕ್ಕೆ ಸೇರಿದ ಮರುದಿನವೇ ಮನೆಯಲ್ಲಿದ್ದ ಚಿನ್ನವನ್ನು ಎಗರಿಸಿದ್ದಾರೆ ಈ ಖರ್ತನಾಕ್ ಕಳ್ಳಿಯರು.
ಈ ಇಬ್ಬರು ಮಹಿಳೆಯರು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಬಳಿ ಸುತ್ತಾಡಿ ಸೆಕ್ಯೂರಿಟಿ ಗಾರ್ಡ್ ಮುಖಾಂತರ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಬಳಿಕ ಮನೆ ಕೆಲಸಕ್ಕೆ ಸೇರಿಕೊಂಡು ಮನೆಯಲ್ಲಿದ್ದ ಚಿನ್ನಾಭರಣಗಳನ್ನ ಕಳವು ಮಾಡುತ್ತಿದ್ದರು ಬೆಳ್ಳಂದೂರು ಪೊಲೀಸ್ ಠಾಣೆ ಪೊಲೀಸರು ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ. ಬಂಧಿತ ಮಹಿಳೆಯರಿಂದ 127 ಗ್ರಾಂ ತೂಕದ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.