- +91 73497 60202
- [email protected]
- November 22, 2024 5:42 PM
ಇಂದಿನಿಂದ(ಜ.2) ಕೋವಿಡ್ ವ್ಯಾಕ್ಸಿನೇಷನ್ ಮತ್ತೆ ಆರಂಭ..! ದಕ್ಷಿಣ ಕನ್ನಡ, ಉಡುಪಿಗೆ ಎಷ್ಟು ಡೋಸ್..?
ನ್ಯೂಸ್ ನಾಟೌಟ್: ಕೋವಿಶೀಲ್ಡ್ (Covishield) ಅಥವಾ ಕೊವ್ಯಾಕ್ಸಿನ್ (Covaxin) 2ನೇ ಲಸಿಕೆ ಪಡೆದವರಿಗೆ ಮತ್ತೊಮ್ಮೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ 30,000 ಡೋಸ್ ಕಾರ್ಬೆವ್ಯಾಕ್ಸ್ (Corbevax) ಲಸಿಕೆಯನ್ನು ಸರಬರಾಜು ಮಾಡಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಈ ಲಸಿಕೆ ನೀಡಬಹುದು ಎನ್ನಲಾಗಿದೆ. ೧೦ ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಲಸಿಕೆಯನ್ನು ಪಡೆಯಬಹುದು. ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ಈ ಲಸಿಕೆಯನ್ನು ನೀಡಲಾಗುವುದು ಎಂದು ವರದಿ ತಿಳಿಸಿದೆ. ಜಿಲ್ಲಾ ಆಸ್ಪತ್ರೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆಗಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ ಎಂದು ಸೂಚನೆ ನೀಡಲಾಗಿದೆ. ಬೆಂಗಳೂರು ನಗರ-840, ಬೆಂಗಳೂರು ಗ್ರಾಮಾಂತರ-480, ಬಿಬಿಎಂಪಿ-5,680, ಚಿಕ್ಕಬಳ್ಳಾಪುರ-520, ಕೋಲಾರ-680, ರಾಮನಗರ-440, ತುಮಕೂರು-1,300, ಬೆಳಗಾವಿ-2,280, ಧಾರವಾಡ-920, ಹಾವೇರಿ-780, ಉತ್ತರ ಕನ್ನಡ-660, ಬಳ್ಳಾರಿ-640, ಚಿತ್ರದುರ್ಗ-720, ದಾವಣಗೆರೆ-740, ಶಿವಮೊಗ್ಗ-820,ವಿಜಯನಗರ-560, ಬಾಗಲಕೋಟೆ-900, ವಿಜಯಪುರ-1,000, ಗದಗ-500, ಕೊಪ್ಪಳ-520, ಚಾಮರಾಜನಗರ-440, ಹಾಸನ-720, ಕೊಡಗು-220, ಮಂಡ್ಯ-720, ಮೈಸೂರು-1,360, ಚಿಕ್ಕಮಗಳೂರು-480, ದಕ್ಷಿಣ ಕನ್ನಡ-1,140, ಉಡುಪಿ-520, ಬೀದರ್-840, ಕಲಬುರಗಿ-1,280, ರಾಯಚೂರು-820, ಯಾದಗಿರಿ-480 ಡೋಸ್ ಹಂಚಲಾಗಿದೆ. ಒಟ್ಟು 30,000 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ