ನ್ಯೂಸ್ ನಾಟೌಟ್: ನನ್ನ ಕನಸಿನಲ್ಲಿ ರಾಮ ಬಂದಿದ್ದ. ನಾನು ಎಲ್ಲರಿಗೂ ಇರುವ ರಾಮ ಎಂದು ಹೇಳಿದ್ದಾನೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಾನು ಈ ತರದ ರಾಮನಲ್ಲ. ಬಿಜೆಪಿಯವರಿಗೆ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಬೇಡಿ ಅಂತಾ ಹೇಳಿದರು ಎಂದು ಕನಸಿನಲ್ಲಿ ಶ್ರೀರಾಮಚಂದ್ರ ಬಂದ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿಕೊಂಡಿದ್ದಾರೆ.
ಶ್ರೀರಾಮ ಮತ್ತೇನಾದ್ರೂ ಹೇಳಿದ್ರ ಎಂದು ಪ್ರಶ್ನಿಸಿದ್ದಕ್ಕೆ ಮತ್ತೆ ಶ್ರೀರಾಮ ಕನಸಿನಲ್ಲಿ ಬಂದರೂ ಬರಬಹುದು ಬಂದಾಗ ಮುಂದಿನ ಎಪಿಸೋಡ್ ಹೇಳುವ ಎಂದಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ. ಇಷ್ಟು ವರ್ಷ ಬಿಟ್ಟು ಈಗ್ಯಾಕೆ ರಾಮ ಮಂದಿರ ಬಂತು? ಇಷ್ಟೊಂದು ದೊಡ್ಡ ರಾಮ ಮಂದಿರ ಏಕೆ, ಬೇರೆ ಗುಡಿಗಳಿಲ್ವಾ? ರಾಮಮಂದಿರ ವಿಚಾರ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಸೆಳೆಯಲು ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ರಾಮಮಂದಿರ ಅರ್ಧ ನಿರ್ಮಾಣವಾಗಿದೆ. ಪೂರ್ಣವಾಗಿ ರಾಮಮಂದಿರ ಕಟ್ಟದೇ ಲೋಕಸಭಾ ಚುನಾವಣೆ ಹಿನ್ನೆಲೆ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ. ಅಪೂರ್ಣವಾಗಿರುವ ರಾಮಮಂದಿರದ ಉದ್ಘಾಟನೆಗೆ ಶಂಕರಾಚಾರ್ಯ ಸ್ವಾಮೀಜಿ ವಿರೋಧ ಮಾಡಿದ್ದಾರೆ.
ಗುಡಿ ಸಂಪೂರ್ಣ ಮುಗಿಯುವವರೆಗೂ ಮೂರ್ತಿ ಪ್ರತಿಷ್ಠಾನೆ ಮಾಡಲು ಬರುವುದಿಲ್ಲ. ರಾಮ ಮಂದಿರ ಹೋರಾಟದಲ್ಲಿ ಮೋದಿ ಪಾತ್ರ ಏನು ಅಂತಾ ಕೇಳಿದ್ದಾರೆ. ಶಂಕರಾಚಾರ್ಯರು ಹೇಳಿಕೆ ಬಗ್ಗೆ ಬಿಜೆಪಿ ಅವರನ್ನೇ ಕೇಳಬೇಕು. ಆದರೆ ಬಿಜೆಪಿ ಅವರು ಶಂಕರಾಚಾರ್ಯರ ಹೇಳಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದರು.