ನ್ಯೂಸ್ ನಾಟೌಟ್ : ಕೆಲವರಿಗೆ ಶ್ವಾನಗಳೆಂದರೆ ಅತೀವವಾದ ಪ್ರೀತಿ.ನಿಯತ್ತು ಇರುವ ಪ್ರಾಣಿ ಅಂದ್ರೆ ನಾಯಿ ಎಂಬ ಮಾತೇ ಇದೆ.ಯಜಮಾನ ಒಂದು ತುತ್ತು ಅನ್ನ ನೀಡಿದ್ರೆ ಜೀವನ ಪೂರ್ತಿ ಆತನ ನೆನಪಲ್ಲೇ ಹಾಗೂ ಆತನಿಗೆ ನಿಯತ್ತಾಗಿರುತ್ತದೆ.ಇಂತಹ ಮೂಕ ಪ್ರಾಣಿಗಳನ್ನು ಕೆಲವರು ಮನೆ ಸದಸ್ಯರಂತೆ ಕಾಣುತ್ತಾರೆ.
ಇದೀಗ ಶ್ವಾನದ ಮಾಲೀಕರು ತಮ್ಮ ಪ್ರೀತಿಯ ಸಾಕು ನಾಯಿಗೆ ಮನುಷ್ಯರಂತೆ ಸೀಮಂತ ಕಾರ್ಯ ಮಾಡುವ ಮೂಲಕ ಸಾಕು ಪ್ರಾಣಿಗಳೂ ಕೂಡ ತಮ್ಮ ಕುಟುಂಬದ ಸದಸ್ಯರು ಎಂಬ ಸಂದೇಶ ಸಾರಿದ್ದಾರೆ.ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಮಾತ್ರವಲ್ಲ ಭಾರಿ ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ಅಜಯ್ ಹಾಗೂ ಸಹೋದರಿ ಜ್ಯೋತಿ ಶ್ವಾನವೊಂದನ್ನ ತಂದು ಸಾಕಿದ್ದರು. ಶ್ವಾನ ರೂಬಿಗೆ ಅರಿಷಿಣ ಕುಂಕುಮ ಇಟ್ಟು, ಹೂವು ಮುಡಿಸಿ, ಹಣ್ಣುಗಳಿಂದ ಉಡಿ ತುಂಬಿ ಆರತಿ ಬೆಳಗಿದ್ದಾರೆ. ಇನ್ನೂ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕ ಪಕ್ಕದ ಮಹಿಳೆಯರು ಸೇರಿ ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ನಾಯಿಯ ಸೀಮಂತ ಕಾರ್ಯ ನೆರವೇರಿಸಿದ್ದಾರೆ.ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.