ನ್ಯೂಸ್ ನಾಟೌಟ್: ಪ್ರಪಂಚದಲ್ಲಿ ಕೆಟ್ಟ ತಾಯಿ ಇರಲಾರಳು ಎಂಬ ಮಾತಿದೆ.ಆದರೆ ಈ ಘಟನೆ ಅದಕ್ಕೆ ತದ್ವಿರುದ್ದವಾಗಿದೆ.ತಾನು ಹೆತ್ತು ಬೆಳೆಸಿದ ನಾಲ್ಕು ವರ್ಷದ ಮಗನನ್ನೇ ತಾಯಿಯೋರ್ವಳು ಕೊಲೆ ಮಾಡಿದ್ದಾಳೆನ್ನುವ ಆರೋಪದ ಬಗ್ಗೆ ವರದಿಯಾಗಿದೆ.
ಗೋವಾದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ಎಐ ಸ್ಟಾರ್ಟ್ಅಪ್ನ 39 ವರ್ಷದ ಸಿಇಒ ಆಗಿರುವ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.ಎಐ ಸ್ಟಾರ್ಟ್ಅಪ್ನ ಸಿಇಒ ಆಗಿರುವ ಆರೋಪಿ ಸುಚನಾ ಸೇಠ್ ಬಂಧಿತ ಆರೋಪಿ. ತನ್ನ ಮಗನ ಶವವನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಕ್ಯಾಬ್ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಚಿತ್ರದುರ್ಗ ಜಿಲ್ಲೆಯಿಂದ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ತನ್ನ ಮಗನೊಂದಿಗೆ ಶನಿವಾರ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ಗೆ ಚೆಕ್-ಇನ್ ಮಾಡಿದ್ದಳು ಮತ್ತು ಸೋಮವಾರ ಬೆಳಿಗ್ಗೆ ಚೆಕ್ ಔಟ್ ಮಾಡಿದ್ದಳು. ಸಿಬ್ಬಂದಿಯೊಬ್ಬರು ಸೋಮವಾರ ಅಪಾರ್ಟ್ಮೆಂಟ್ ಸ್ವಚ್ಛಗೊಳಿಸಲು ಹೋದಾಗ ಕೆಲವು ರಕ್ತದ ಕಲೆಗಳನ್ನು ಗಮನಿಸಿದ ನಂತರ, ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದೆ. ಕಲಂಗುಟ್ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ತನ್ನ ಮಗನಿಲ್ಲದೆ ಹೋಟೆಲ್ನಿಂದ ಹೊರಟು ಹೋಗುತ್ತಿರುವುದು ಕಂಡುಬಂದಿದೆ.
ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ತನಿಖೆ ಮಾಡುವ ಸಮಯದಲ್ಲಿ, ಮಹಿಳೆಯು ಬೆಂಗಳೂರಿಗೆ ಕರೆದೊಯ್ಯಲು ಕ್ಯಾಬ್ ವ್ಯವಸ್ಥೆ ಮಾಡುವಂತೆ ಕೇಳಿದ್ದಳು ಎಂದು ಹೋಟೆಲ್ ಸಿಬ್ಬಂದಿ ಹೇಳಿದರು. ಕ್ಯಾಬ್ ದುಬಾರಿಯಾಗಬಹುದೆಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಆಕೆಗೆ ವಿಮಾನದಲ್ಲಿ ಪ್ರಯಾಣಿಸುವಂತೆ ಸಲಹೆ ನೀಡಿದ್ದರು, ಆದರೆ ಆಕೆ ಕ್ಯಾಬ್ನಲ್ಲೇ ಪ್ರಯಾಣ ಮಾಡುತ್ತೇನೆಂದಿದ್ದಳು ಎನ್ನಲಾಗಿದೆ.ಈ ಎಲ್ಲಾ ಮಾಹಿತಿ ಪಡೆದ ಗೋವಾ ಪೊಲೀಸರು ಕ್ಯಾಬ್ ಚಾಲಕನನ್ನು ಸಂಪರ್ಕಿಸಿ ಆರೋಪಿಯೊಂದಿಗೆ ಫೋನ್ ಮೂಲಕ ಮಾತನಾಡಿ, ಆಕೆಯ ಮಗನ ಬಗ್ಗೆ ವಿಚಾರಿಸಿದ್ದಾರೆ.
ರೂಮಿಗೆ ಕರೆದೊಯ್ದಿದ್ದ ಮಗು ವಾಪಸ್ ಹೋಗುವಾಗ ಇರಲಿಲ್ಲ ಎಂದು ಪ್ರಶ್ನಿಸಿದಾಗ ಸಂಬಂಧಿಕರ ಮನೆಗೆ ಕಳಸಿದ್ದೇನೆಂದು ಸುಚನಾ ಸೆಠ್ ಸುಳ್ಳು ಹೇಳಿದ್ದಾಳೆ. ಆಕೆಯ ಉತ್ತರಗಳು ತಪ್ಪಿಸಿಕೊಳ್ಳುವ ಮತ್ತು ಅನುಮಾನಾಸ್ಪದವೆಂದು ಕಂಡು, ಗೋವಾ ಪೊಲೀಸ್ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಹೈವೇ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ನಂತರ ಟ್ಯಾಕ್ಸಿ ಚಾಲಕ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ.
ನಂತರ ಚಾಲಕ ಐಮಂಗಲ ಪೊಲೀಸರಿಗೆ ಆರೋಪಿ ಸುಚನಾ ಸೇಠ್ ಒಪ್ಪಿಸಿದ್ದಾನೆ. ಕಾರ್ನ ಡಿಕ್ಕಿಯಲ್ಲಿದ್ದ ಸೂಟ್ ಕೇಸ್ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಕೊಲೆಗೆ ನಿಖರವಾದ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಆರೋಪಿ ಮಹಿಳೆ ತನ್ನ ಪತಿಯೊಂದಿಗೆ ವಿಚ್ಚೇದನ ಪಡೆದಿದ್ದಳು. ನಂತರ ಕೋರ್ಟ್ ಮಗುವನ್ನು ತಂದೆಗೆ ಭೇಟಿ ಮಾಡಲು ಅವಕಾಶ ನೀಡ ಬೇಕು ಎಂದು ಸೂಚನೆ ನೀಡತ್ತು. ಇದು ಇಷ್ಟವಿರಲಿಲ್ಲ ಹೀಗಾಗಿ ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಮಹಿಳೆ ತನ್ನ ಮಗನೊಂದಿಗೆ ಶನಿವಾರ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್ಗೆ ಚೆಕ್-ಇನ್ ಮಾಡಿದ್ದಳು ಮತ್ತು ಸೋಮವಾರ ಬೆಳಿಗ್ಗೆ ಚೆಕ್ ಔಟ್ ಮಾಡಿದ್ದಳು. ಸಿಬ್ಬಂದಿಯೊಬ್ಬರು ಸೋಮವಾರ ಅಪಾರ್ಟ್ಮೆಂಟ್ ಸ್ವಚ್ಛಗೊಳಿಸಲು ಹೋದಾಗ ಕೆಲವು ರಕ್ತದ ಕಲೆಗಳನ್ನು ಗಮನಿಸಿದ ನಂತರ, ಹೋಟೆಲ್ ಸಿಬ್ಬಂದಿ ಗೋವಾ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದೆ. ಕಲಂಗುಟ್ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ತನ್ನ ಮಗನಿಲ್ಲದೆ ಹೋಟೆಲ್ನಿಂದ ಹೊರಟು ಹೋಗುತ್ತಿರುವುದು ಕಂಡುಬಂದಿದೆ.ಗೋವಾದ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಮುಗಿಸಿರುವ ಆರೋಪದ ಮೇಲೆ ಬೆಂಗಳೂರು ಮೂಲದ ಎಐ ಸ್ಟಾರ್ಟ್ಅಪ್ನ 39 ವರ್ಷದ ಸಿಇಒ ಆಗಿರುವ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.