- +91 73497 60202
- [email protected]
- November 23, 2024 1:26 AM
ಬೋರ್‌ವೆಲ್ ಗೆ ಬಿದ್ದ ಪುಟ್ಟ ಬಾಲಕಿ ಸಾವು ..! ಸೇನೆ ಮತ್ತು ಎನ್‌ಡಿಆರ್‌ಎಫ್ ಪ್ರಯತ್ನ ವಿಫಲವಾದದ್ದೇಗೆ..?
ನ್ಯೂಸ್ ನಾಟೌಟ್: ಸುಮಾರು 30 ಅಡಿ ಆಳದ ತೆರೆದ ಬೋರ್‌ವೆಲ್ ಒಳಗಿಂದ ರಕ್ಷಿಸಿದ್ದ 3 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಗುಜರಾತ್ ನ ದ್ವಾರಕಾ ಜಿಲ್ಲೆಯ ರಾನ್ ಗ್ರಾಮದಲ್ಲಿ ನಡೆದಿದೆ. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಬಾಲಕಿಯನ್ನು ರಕ್ಷಿಸಿತ್ತು. ಆದರೆ, ರಕ್ಷಿಸಿದ 1 ಗಂಟೆಯೊಳಗೆ ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ(ಜ.೧) ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಾಲಕಿ ಆಟವಾಡುತ್ತಾ ಹೋಗಿ ಅಲ್ಲೇ ಇದ್ದ ಬೋರ್‌ವೆಲ್‌ಗೆ ಬಿದ್ದಿದ್ದಳು. ಈ ಕುರಿತು ಮಾಹಿತಿ ಪಡೆದ ಜಿಲ್ಲಾಡಳಿತವು ರಕ್ಷಣೆಗಾಗಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹಾಯ ಕೋರಿತ್ತು. ತಜ್ಞರ ತಂಡ ಗಾಂಧಿನಗರದಿಂದ ರಾತ್ರಿ 8 ಗಂಟೆಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿತ್ತು. ಬಾಲಕಿಯ ಕೈಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಎಲ್ ಆಕಾರದ ಕೊಕ್ಕೆ ಸಿಕ್ಕಿಸಲಾಗಿತ್ತು. ಆ ಬಳಿಕ ಸಮಾನಾಂತರವಾಗಿ ಜೆಸಿಬಿ ಮೂಲಕ ಮಣ್ಣು ಅಗೆಯಲಾಯಿತು ಎನ್ನಲಾಗಿದೆ. “ರಾತ್ರಿ 9:50ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಜಿಲ್ಲಾಧಿಕಾರಿ ಎಚ್.ಬಿ.ಭಗೋರಾ ತಿಳಿಸಿದ್ದರು. ಆದರೆ ಇದೀಗ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ