ನ್ಯೂಸ್ ನಾಟೌಟ್ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶೋಷಿತರ ಜಾಗೃತಿ ಸಮಾವೇಶ ಆರಂಭವಾಗಿದೆ. ಸಮಾವೇಶಕ್ಕೆ ಆಗಮಿಸುವವರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ನಡೆಸಿದ್ದು ವಿಶೇಷವಾಗಿತ್ತು.
ಆಯೋಜಕರು ಎರಡೂವರೆ ಲಕ್ಷ ಜನ ಸೇವಿಸಲು 32 ಸಾವಿರ ಕೆ.ಜಿ ಚಿಕನ್ ತಯಾರಿಸಿದ್ದಾರೆ. 150ಕ್ಕೂ ಹೆಚ್ಚು ಜನ ಬಾಣಸಿಗರು ಬಿರಿಯಾನಿ ಸಿದ್ಧಪಡಿಸಿದ್ದು, 1 ಸಾವಿರ ಕೌಂಟರ್ಗಳಲ್ಲಿ ಬಿರಿಯಾನಿ, ಪಲಾವ್ ವಿತರಣೆ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ನಾಲ್ಕು ವೆಜ್ ಕೌಂಟರ್ಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಶೋಷಿತರ ಸಮಾವೇಶವನ್ನು ಮಾದಾರ ಚನ್ನಯ್ಯ ಮಠದ ಬಳಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಆಯೋಜಿಸಲಾಗಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಇತರೆ ಸಚಿವರು ಭಾಗಿಯಾಗಲಿದ್ದಾರೆ. ಜಾಗೃತಿ ಸಮಾವೇಶದಲ್ಲಿ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಸುಮಾರು 150 ಎಕರೆ ಪ್ರದೇಶದಲ್ಲಿ ಸಮಾವೇಶದ ವೇದಿಕೆಗೆ ಸಿದ್ಧವಾಗಿದೆ. ಮುಖ್ಯ ವೇದಿಕೆಯಲ್ಲಿ ಗಣ್ಯರಿಗೆ 270 ಆಸನಗಳ ವ್ಯವಸ್ಥೆ, ಎಡ ಮತ್ತು ಬಲ ಬದಿಯ ವೇದಿಕೆಯಲ್ಲಿ ತಲಾ 150 ಆಸನ ವ್ಯವಸ್ಥೆಯಾಗಿದೆ. ಒಟ್ಟು ಮೂರುವರೆ ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆಯಲ್ಲಿ ಬಸವಣ್ಣ, ಅಂಬೇಡ್ಕರ್ ಭಾವಚಿತ್ರ ಅಳವಡಿಸಲಾಗಿದೆ. 22 ಎಲ್ಇಡಿ ಪರದೆ ಹಾಕಲಾಗಿದೆ.