ನ್ಯೂಸ್ ನಾಟೌಟ್ : ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 6ರ ಸ್ಪರ್ಧಿ ನಟಿ ಸೋನು ಪಾಟೀಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು, ಬಿಗ್ಬಾಸ್ ಸೀಸನ್ 6ರ ಕಂಟೆಸ್ಟೆಂಟ್ ಆಗಿರೋ ಸೋನು ಪಾಟೀಲ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸೋನು ಪಾಟೀಲ್ ಅವರು ಬಿಗ್ಬಾಸ್ ಸೀಸನ್ 6 ಸ್ಪರ್ಧಿಯಾಗಿದ್ದು, ಮನೆ ಮಗಳಾಗಿ ಗುರುತಿಸಿಕೊಂಡಿದ್ದರು.ಇವರು ಮಾತನಾಡುವ ಶೈಲಿ ಎಲ್ಲರಿಗೂ ಇಷ್ಟವಾಗಿತ್ತು ಮತ್ತು ಗ್ರಾಮೀಣ ಭಾಷೆಯಲ್ಲಿ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕ ಭಾಷೆಯನ್ನು ಮಾತಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಸೋನು ಪಾಟೀಲ್ ಬಾಗಲಕೋಟೆ ಜಿಲ್ಲೆಯವರಾಗಿದ್ದಾರೆ. ಸದ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೋನು ಪಾಟೀಲ್ ಅವರು ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸೋನು ಪಾಟೀಲ್ ಅವರ ಕೈ ಹಿಡಿದ ವರನ ಹೆಸರು ಸಂಕೇತ್. ಸೋನು ಪಾಟೀಲ್ ಅವರು ಮದುವೆ ಮಾಡಿಕೊಂಡ ಹುಡುಗ ಏನು ಕೆಲಸ ಮಾಡುತ್ತಾರೆ.ಎಲ್ಲಿಯವರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಎಂದು ಎಲ್ಲೂ ರಿವೀಲ್ ಮಾಡಿಲ್ಲ. ಸೋನು ಪಾಟೀಲ್ ಅವರು ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸೋನು ಪಾಟೀಲ್ ಅವರು ಸಾಕಷ್ಟು ಆಕ್ಟಿವ್ ಆಗಿದ್ದಾರೆ.