ನ್ಯೂಸ್ ನಾಟೌಟ್ : ಬಿಗ್ ಬಾಸ್ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ದೊಡ್ಮನೆಯಿಂದ ಬಂದ ಬಳಿಕ ಫುಲ್ ಹ್ಯಾಪಿಯಾಗಿದ್ದಾರೆ. ಇಗಾಗಲೇ ತಾಯಿಗೆ ಕೊಟ್ಟ ಮಾತಿನಂತೆ ಕನಸಿನ ಮನೆ ನಿರ್ಮಾಣಕ್ಕೂ ಮುಂದಾಗಿರುವ ಕಾರ್ತಿಕ್ಗೆ ಎತ್ತ ಹೋದ್ರು ಅಭಿಮಾನಿಗಳ ತಂಡವೇ ಸೃಷ್ಟಿಯಾಗಿದೆ. ಇದೀಗ ಕಿಚ್ಚನ ಕೈಯಾರೆ ಸೀಸನ್ 10 ಟ್ರೋಫಿ ಪಡೆದ ಸಂತಸವನ್ನು ಹಂಚಿಕೊಂಡಿದ್ದಾರೆ.ಮಾಧ್ಯಮವೊಂದರಲ್ಲಿ ತಮ್ಮ ಜರ್ನಿ ಬಗ್ಗೆ ಮಾತನಾಡಿದ ಕಾರ್ತಿಕ್ ಮಹೇಶ್, “ಜರ್ನಿ ಸಖತ್ತಾಗಿತ್ತು, ಫುಲ್ ಕಾನ್ಫಿಡೆಂಟಾಗಿತ್ತು. ಸಖತ್ ಸ್ಫೋರ್ಟೀವ್ ಆಗಿತ್ತು. ತುಂಬಾ ಹ್ಯಾಪಿನೆಸ್, ಸ್ವಲ್ಪ ಬೇಜಾರು, ಮಿಶ್ರವಾದ ಇಮೋಷನ್ ಇತ್ತು” ಎಂದಿದ್ದಾರೆ.
ಹೀಗೆ ಬಿಗ್ ಬಾಸ್ ಜರ್ನಿ ಬಗ್ಗೆ ಸಕತ್ ಖುಷಿಯಿಂದ ಮಾತನಾಡಿದ ಕಾರ್ತಿಕ್ “ನಾನು ಡೌನ್ ಆಗಿರಲಿಲ್ಲ. ನೀನು ಡೌನ್ ಆಗಿದ್ದೀಯಾ ಅಂತ ಹೇಳಿ ಡೌನ್ ಮಾಡಿಬಿಟ್ರು. ನನ್ನ ಗೇಮಲ್ಲಿ ಅದು ಎಫೆಕ್ಟ್ ಆಗಿರಲಿಲ್ಲ. ನಾನು ಮೆಂಟಲಿ ಸ್ವಲ್ಪ ವೀಕ್ ಆಗಿದ್ದೆ ಅಷ್ಟೆ. ಒಬ್ಬ ಮನುಷ್ಯನಿಗೆ ಯಾವತ್ತು ಮುಖ್ಯವಾಗಿರೋದು ಕಾನ್ಫಿಡೆನ್ಸ್. ಅದನ್ನ ಯಾವತ್ತು ಬಿಟ್ಟುಕೊಟ್ಟಿಲ್ಲ” ಎಂದು ಹೇಳಿದ್ದಾರೆ.