ನ್ಯೂಸ್ ನಾಟೌಟ್: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ರಾಮಮಂದಿರ ಸಿದ್ಧತೆ ನಡುವೆ 395% ವಿಮಾನ ದರ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಬೇಡಿಕೆಗೆ ಅನುಗುಣವಾಗಿ ವಿಮಾನದ (Flight) ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಹೆಚ್ಚಿಸಿವೆ. ಕಳೆದ 10 ದಿನದಲ್ಲಿ 6,000 ಇದ್ದ ಟಿಕೆಟ್ ದರ ಈಗ 21,500 ಆಗಿದೆ ಎನ್ನಲಾಗಿದೆ. ಬರೋಬ್ಬರಿ ಶೇ.400ರಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ 6,000 ಇತ್ತು, ಜ.19ಕ್ಕೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನದ ಟಿಕೆಟ್ 21,500 ಆಗಿದೆ. -ಜನವರಿ 20 ರಂದು ಹೊರಡಲಿರುವ ವಿಮಾನದ ಟಿಕೆಟ್ ದರ 29,700 ಆಗಿದೆ ಎಂದು ವರದಿ ತಿಳಿಸಿದೆ.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಧ್ಯಾಹ್ನ1ಕ್ಕೆ ವಿಮಾನ ಹೊರಡಲಿದೆ. ಮಾಮೂಲಿ ದಿನಕ್ಕೆ ಹೋಲಿಸಿದರೆ ಟಿಕೆಟ್ ದರದಲ್ಲಿ ಶೇ.395% ಏರಿಕೆಯಾಗಿದೆ ಎನ್ನಲಾಗಿದೆ.
ಜ.20 ಕ್ಕೂ ಮುನ್ನ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್ ಸೋಲ್ಡ್ ಆಗಿದ್ದು, ವಾರಾಂತ್ಯದಲ್ಲೇ ಅಯೋಧ್ಯೆಯ ವಿಮಾನ ಟಿಕೆಟ್ ದರ ಭಾರೀ ಏರಿಕೆಯಾಗಿದ್ದು, ಶನಿವಾರ, ಭಾನುವಾರ ರಜೆ ಇರುವ ಕಾರಣ ಅಯೋಧ್ಯಾಯತ್ತ ಜನ -ರಾಮ ಮಂದಿರ ಉದ್ಘಾಟನೆಗೂ ಮುನ್ನವೇ ತೆರಳುತ್ತಿದ್ದಾರೆ.