ನ್ಯೂಸ್ ನಾಟೌಟ್ : ಇಷ್ಟು ದಿನ ನೋಟಿನಲ್ಲಿ ಭಾರತದ ಪಿತಾಮಹಾ ಮಹಾತ್ಮ ಗಾಂಧಿಯವರ ಫೋಟೋ ರಾರಾಜಿಸುತ್ತಿತ್ತು.ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ನೋಟೊಂದು ಹರಿದಾಡುತ್ತಿದ್ದು,ಭಾರಿ ವೈರಲ್ ಆಗುತ್ತಿದೆ.
ಹೌದು, ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೂ (Ayodhya Ram Mandir Pran Pratishta) ಮುನ್ನವೇ ರೂ.500ರ ಹೊಸ ನೋಟು (500 RS currency note) ಹೊರಬಿಡಲಾಗಿದ್ದು, ಅದರಲ್ಲಿ ನೂತನ ರಾಮ ಮಂದಿರ ಹಾಗೂ ಶ್ರೀರಾಮನ ಚಿತ್ರವಿದೆ ಎಂಬ ಸುದ್ದಿಯೊಂದಿಗೆ ನೋಟಿನ ಚಿತ್ರ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ.
ಸದ್ಯಕ್ಕೆ 500ಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ.500 ನೋಟುಗಳಲ್ಲಿ ಗಾಂಧಿ ಆಕೃತಿಯ ಬದಲು ಶ್ರೀ ರಾಮನ ಚಿತ್ರ ಮುದ್ರಿಸಲಾಗುತ್ತಿದೆ ಎಂಬ ಪ್ರಚಾರ ಜೋರಾಗಿದೆ. ಇದರಲ್ಲಿ ಒಂದು ಬದಿಯಲ್ಲಿ ಶ್ರೀ ರಾಮನ ಚಿತ್ರವನ್ನು ಹಾಗೂ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ರಾಮ ದೇವಾಲಯದ ಮಾದರಿಯನ್ನು ಮುದ್ರಿಸಲಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಕಾಮೆಂಟ್ ಮಾಡುತ್ತಾ ಅವರವರ ಅಭಿಪ್ರಾಯ ತಿಳಿಸುತ್ತಿದ್ದಾರೆ. ಜನವರಿ 22ರಂದು ಈ ನೋಟು ಬಿಡುಗಡೆಯಾಗಲಿದೆ ಎಂದೂ ಹೇಳಲಾಗುತ್ತಿದೆ.
ಆದರೆ ನೋಟುಗಳ ಬದಲಾವಣೆಗೆ ಸಂಬಂಧಿಸಿ ಆರ್ಬಿಐ ಇದುವರೆಗೆ ಏನನ್ನೂ ಪ್ರಕಟಿಸಿಲ್ಲ.ಇದು ಸತ್ಯಕ್ಕೆ ದೂರವಾದ ಮಾತುಇಂಥ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸರಕಾರ ಈ ಬಗ್ಗೆ ಚರ್ಚೆಗಳನ್ನು ನಡೆಸುತ್ತೆ. ಆರ್ಬಿಐ ಆಗಲೀ ಸರ್ಕಾರವಾಗಲೀ ದಿಢೀರ್ ಆಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ವಾದ್ದರಿಂದ ಈ ಫೋಟೋ ಫೇಕ್ ಎಂದು ಹೇಳಲಾಗುತ್ತಿದೆ. 1996ರಲ್ಲಿ RBI ಕರೆನ್ಸಿ ನೋಟುಗಳ ಮೇಲೆ ಅಶೋಕಸ್ತೂಪದ ಬದಲಿಗೆ ಮಹಾತ್ಮ ಗಾಂಧಿ ಸರಣಿಯನ್ನು ಮುದ್ರಿಸಲು ಪ್ರಾರಂಭಿಸಿತು. ಅಂದಿನಿಂದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರವಿದ್ದು, ಅದನ್ನು ಬದಲಾಯಿಸುವ ಯಾವುದೇ ನಿರ್ಧಾರವನ್ನು ಆರ್ಬಿಐ ಇದುವರೆಗೆ ಕೈಗೊಂಡಿಲ್ಲ.ಹೀಗಾಗಿ ಈಗ ವೈರಲ್ ಆಗುತ್ತಿರುವುದು ಎಡಿಟ್ ಮಾಡಿದ ಫೋಟೋ ಎಂಬುದು ಖಚಿತವಾಗಿದೆ.