ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು.ಇದೀಗ ನನಸು ಆಗುತ್ತಿದೆ. ಇದಕ್ಕಾಗಿ ಅದೆಷ್ಟೋ ರಾಮ ಭಕ್ತರ ಶ್ರಮವೂ ಇದೆ.ರಾಮ ಮಂದಿರ ನಿರ್ಮಾಣವಾಗಲೇ ಬೇಕೆಂದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿದವರು ಅದೆಷ್ಟೋ ಮಂದಿ.ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಆದರೆ 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಯಾಕೆಂದರೆ ನೇಪಾಳದ ಅಂಚೆಚೀಟಿಯೊಂದನ್ನು ನೋಡಿದಾಗ ಈ ಪ್ರಶ್ನೆಯೇಳೋದಕ್ಕೆ ಆರಂಭವಾಗಿದೆ.
ನೇಪಾಳದಿಂದ 57 ವರ್ಷಗಳ ಹಿಂದೆ ಅಚ್ಚಾದ ಅಂಚೆ ಚೀಟಿಯ ಫೋಟೋವೊಂದು ಹೊರಬಿದ್ದಿದ್ದು, ಭಾರಿ ಅಚ್ಚರಿಗೂ ಕಾರಣವಾಗಿದೆ.ಅದರಲ್ಲಿ 2024ನ್ನೂ ಶ್ರೀರಾಮನನ್ನೂ ಜೋಡಿಸಿದ ಒಂದು ಅಂಚೆ ಚೀಟಿಯ ಫೋಟೋ ಎಲ್ಲೆಡೆ ವೈರಲ್ (Viral Story) ಆಗುತ್ತಿದೆ. ಈ ಅಂಚೆ ಚೀಟಿ (Nepa Postal Stamp) 57 ವರ್ಷಗಳ ಹಿಂದಿನದಾಗಿದ್ದು, ರಾಮ ಮಂದಿರ ಉದ್ಘಾಟನೆಯ ಸಮಯವನ್ನು ಅಷ್ಟು ಹಿಂದೆಯೇ ಸೂಚಿಸಿತ್ತು ಎಂದು ಹೇಳಲಾಗುತ್ತಿದೆ.
ಈ ಅಂಚೆಚೀಟಿಯನ್ನು ಏಪ್ರಿಲ್ 18, 1967ರಂದು ರಾಮ ನವಮಿಯ ಸಂದರ್ಭದಲ್ಲಿ (ಭಗವಾನ್ ರಾಮನ ಜನ್ಮದಿನ) ಬಿಡುಗಡೆ ಮಾಡಲಾಗಿತ್ತು. ಇದರ ಮೇಲೆ ರಾಮ ಸೀತೆಯ ಚಿತ್ರವಿದ್ದು, ಕೆಳಗೆ, ವಿ.ಎಸ್.(ವಿಕ್ರಮ ಸಂವತ್ಸರ ) 2024 ಎಂದು ಬರೆಯಲಾಗಿದೆ. ಇದು ರಾಮಮಂದಿರ ಉದ್ಘಾಟನೆಯ ವರ್ಷವನ್ನು ಆಗಲೇ ಊಹಿಸಿತ್ತೇ ಎಂಬ ಅಚ್ಚರಿಗೆ ದೂಡಿದೆ.
ಈ ಅಪರೂಪದ ಅಂಚೆ ಚೀಟಿ ಲಖನೌದ ಅಶೋಕ್ ಕುಮಾರ್ ಎಂಬವರ ಬಳಿ ಇದೆ. ಅವರು ಅದನ್ನು ತಮ್ಮ ʼದಿ ಲಿಟಲ್ ಮ್ಯೂಸಿಯಂʼನಲ್ಲಿ ಇರಿಸಿದ್ದಾರೆ. ಈ ಅಂಚೆಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇದರ ಇತಿಹಾಸದಲ್ಲಿ ರಹಸ್ಯ ಅಡಗಿದೆ.1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯನ್ನು ಭಗವಾನ್ ರಾಮ ಮತ್ತು ಸೀತೆಗೆ ಸಮರ್ಪಿಸಲಾಗಿದೆ. ಆಗ ಇದರ ಬೆಲೆ 15 ಪೈಸೆ ಇತ್ತು. ಈ ಅಂಚೆ ಚೀಟಿಯ ಮೇಲೆ ʼರಾಮ ನವಮಿ 2024ʼ ಎಂದು ಛಾಪಿಸಲಾಗಿದೆ. ಅಂಚೆ ಚೀಟಿಯನ್ನು ಏಪ್ರಿಲ್ 18, 1967ರಂದು ರಾಮನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅನುಸರಿಸುವ ಹಿಂದೂ ಕ್ಯಾಲೆಂಡರ್ನ ವಿಕ್ರಮ್ ಸಂವತ್ನ 2024 ವರ್ಷವನ್ನು ಅಂಚೆ ಚೀಟಿ ಮೇಲೆ ಹಾಕಲಾಗಿದೆ. ಆದರೆ, ಇದರ ನಿಜವಾದ ಕಾರಣ ಬೇರೆ ಇದೆ. ಏನೆಂದರೆ, ವಿಕ್ರಮ ಸಂವತ್ ಗ್ರೆಗೋರಿಯನ್ ಕ್ಯಾಲೆಂಡರ್ಗಿಂತ 57 ವರ್ಷಗಳ ಮುಂದಿದೆ. ಆದ್ದರಿಂದ, ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ 1967 ರ ವರ್ಷವು ವಿಕ್ರಮ್ ಸಂವತ್ನಲ್ಲಿ 2024 ಆಗಿತ್ತು. ಆದ್ದರಿಂದ, 1967ರಲ್ಲಿ ಬಿಡುಗಡೆಯಾದ ಅಂಚೆಚೀಟಿಯ ಮೇಲೆ 2024 ಎಂದು ಬರೆಯಲಾಗಿದೆ.